Bhasaka
← Back to home

ಭಳಿರೆ ತಿರುಪತಿ ತಿಮ್ಮಾ

Author: ವಿಜಯದಾಸCategory: ಶ್ರೀಕೃಷ್ಣ
ಭಳಿರೆ ತಿರುಪತಿ ತಿಮ್ಮಾ | ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ | ಇಳಿಯೊಳಗೆ ಬಿರಿದು ಸಲ್ಲುವದು ನಿಜ ಭಕ್ತವ | ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಅತಿಶ್ರೇಷ್ಠನಾಗಿ ಕೀರ್ತಿ ಪಡೆದು ಪಸರಿಸಿ | ಪ್ರತಿಯಿಲ್ಲ ಎನಿಸಿಕೊಂಬೆ ನಾ | ಸತತವನು ಪರರಾಶೆ ಮಾಡದಲೆ | ಚತುರತನ ಚತುರೋಪಾಯದಿ ಬಾಳುವೆ | ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು | ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ | ಲತೆವೊಲು ಬೆಳದು ಬಲು | ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ ||1|| ಜಡದೇಹವನು ಮೆಚ್ಚಿ ಮುಪ್ಪು ದೂರೆಂತೆಂದು | ಕಡು ಸಾಹಸವ ತಾಳಿದೇ ಒಡಿಯರಾರೆನಗಿಲ್ಲ ಒಬ್ಬರಿಗೆ | ಒಡಿಯನೆಂದು ಎಡೆಎಡೆಗೆ ಪೇಳಿಕೊಂಬೆ | ಮಡಗಿ ಧನವನು ಧರ್ಮ ಕೊಡದತೀ ಕೃಪಣನಾಗಿ | ಅಡಿಗಡಿಗೆ ಉಚ್ಛೈಸುವೆ | ಪಡವೆ ಸಂಸಾರವೆಂಬೊ ಅಹಂಕಾರವನು ತಾಳಿ | ಎಡಹಿ ಮುಂಗಾಣದ ಅಧಮನಂತೆ ಇದ್ದೆನಲ್ಲದೆ ||2|| ಪುರುಷ ಪಟಾಂತ್ರದವನಾಗಿ ಎಲ್ಲ | ಧಿಕ್ಕರಿಸಿ ನಿರಾಕರಿಸುವೆ | ಜರೆದು ನಿಷ್ಕರುಣದಲಿ | ವರ ಅಭ್ಯಾಗತಿಗಳನು | ಹುರುಳಗೆಡಿಸಿ ನೋಡುವೆ | ಗುರು ಹಿರಿಯರನು ಮರುಗುವಂತೆ ಕೇಡು ನುಡಿದು ಉ | ತ್ತರ ಅನುತ್ತರನಾಡುವೆ | ಪರಿಪರಿಯ ಮಾಯದ ಶರಧಿಯೊಳು ಬಿದ್ದು ಲಜ್ಜಿ ಉರಿಯೊಳಗೆ ಪೊಕ್ಕಂತೆ ಮರುಗುತ್ತಿದ್ದನಲ್ಲವೆ ||3|| ಅಪರಾಧವೇನಯ್ಯಾ ವಿಪರೀತ ತೋರದೆ | ಅ | ಪರಿಮಿತ ಪರಮಹಿಮನೆ | ಕಪಟ ನಾಟಕನೆಂಬ ಪೆಸರುಂಟು ಮಡದಿ | ಉಪಕಾರಕ್ಕಪಕಾರವೊ | ಚಪಳನಜಮಿಳಗಂದು ಮತಿಸುಳೂದಿಂದಲಿ | ನಿಪುಣತನವಿರಲಿಲ್ಲವೊ | ಸಪುತೆರಡು ಲೋಕದೊಳಗಾನೆಂದು ಇದ್ದೆನಿಲ್ಲವೊ | ವಿಪುಳ ವೈಕುಂಠ ತೊಲಗಿಸದೆ ಸುಮ್ಮನಿರಬಲ್ಲನೆ||4|| ಪರದೈವ ನಾನೆಂದು ಪೇಳುವರ ಗಂಡನೆ | ಸರಿಗಾಣೆ ಈ ಮಹಿಯೊಳು | ಕರುಣದಳತಿಯಲಿ ಕಿಂಕರರ ಪತಿ | ಕರಿಸಿ ನಿಜಕರವ ಪಿಡಿಯಾಡದೆ | ಹರಸುರಪ ಪರಮೇಷ್ಠಿ ನರ ಹರಿದು ತಲ್ಲಣಿಸಿ ನೆರದು ಭೀಕರಗೊಂಬರು | ಪರಮಾಣು ರೂಪ ಭಕ್ತರ ಪರುಶ | ಸಿರಿ ವಿಜಯವಿಠ್ಠಲ ವರ ವೆಂಕಟನೆ | ಶರಣಜನ ಪರಿವಾರ||5||

Thoughts & Reflections

0

No reflections shared yet. Be the first to share your thoughts!

Share your thought