Bhasaka
← Back to home

ಭಳಿರೆ ಭಳಿರೆ ನರಸಿಂಹ ಮಹಾಸಿಂಹ |

Author: ವಿಜಯದಾಸCategory: ಶ್ರೀನರಸಿಂಹ
ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ಮಲಮಲಾ ಮಲತವರ ವೈರಿ ಉರಿಮಾರಿ ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ ||1|| ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ ||2|| ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ | ಬಗ ಬಗ ಬಗ ಬಗದು ರಕುತವನ್ನು | ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ | ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ ||3|| ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು | ಝಗ ಝಗಾ ಝಗಝಗಿಪ ಮಕುಟ ತೂಗೆ | ನಗು ನಗು ನಗು ನಗುತ ಸುರರು ಗಗನದಿ ನೆರೆದು | ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ ||4|| ಒಂದೊಂದೊಂದೊಂದು ಮುನಿಗಳಿಗೊಲಿದು | ಅಂದಂದಂದಂದದೀಗಾಯತ ವೊಲಿದು | ಅಂದಂದಂದವ ಕಾವ ಚೊಳಂಗಿರಿ | ಮಂದಿರನೆ ವಿಜಯವಿಠ್ಠಲ ನರಸಿಂಹಾ||5||

Thoughts & Reflections

0

No reflections shared yet. Be the first to share your thoughts!

Share your thought