Bhasaka
← Back to home

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ

Author: ವಿಜಯದಾಸCategory: ಶ್ರೀಕೃಷ್ಣ
ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ | ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ಭಕುತಿ ಇಲ್ಲದೇ ಅನುದಿನ | ಅಕಟನಿಲ್ಲದೆ | ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ | ಪಕೆ ಎರಗಿದೆ ಯಾತಕೆ ಬಾರದವನಾದೆ ||1|| ಆರನ್ನ ಕಾಣದೆ ನಿನ್ನನು ನಾ | ಸಾರಿದೆ ಮಾಣದೆ | ವಾರ ವಾರಕೆನ್ನ ಉದ್ಧಾರವ ಮಾಳ್ಪುದು | ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ ||2|| ನುತಿಸಿ ವಂದನೆ ಮಾಡುವೆ ನಿತ್ಯ | ಕೃತಿಯನಂದನೆ | ಸತತ ವಿಜಯವಿಠ್ಠಲನ ಪದಾಬ್ಜದಿ | ರತಿ ಆಗುವಂತೆ ಸುಮತಿಯನು ಕರುಣಿಸೇ ||3||

Thoughts & Reflections

0

No reflections shared yet. Be the first to share your thoughts!

Share your thought