Bhasaka
← Back to home

ಭಾರತೀ ಭವಹಾರಿಯೆ ಭಕ್ತರಪ್ರಿಯೆ

Author: ವಿಜಯದಾಸCategory: ಶ್ರೀಕೃಷ್ಣ
ಭಾರತೀ ಭವಹಾರಿಯೆ | ಭಕ್ತರಪ್ರಿಯೆ | ಭಾರತೀ ಭವಹಾರಿಯೇ ಈರೈದು ಇಂದ್ರಿಯಗಳುಗಾರು | ಮಾಡದಂತೆ ಸಾಕಾರವಾಗಿ ಪಾಲಿಸು ಮತಿವಂತನ ಮಾಳ್ಪುದು | ಇದಕೆ ನಿನ್ನ | ಪತಿಯ ಈಗಲೆ ಕೇಳ್ವುದು | ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು- ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು ||1|| ಮಹತ್ತತ್ವದಭಿಮಾನಿ ನೀ | ಕಲಿರಹಿತೆ | ಅಹಿಪತಿ ಅಪ್ಪ ಖಗಪ ಜನನೀ || ಮಹಾಪ್ರಮಾಣು ವ್ಯಾಪುತೆ ಸರ್ವಜೀವರ | ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ ||2|| ಶರಣು ಶರಣು ಗುಣಮಣಿ | ಚಂದ್ರಪ್ರಕಾಶೆ | ಪರಮ ಪಾವನಿ ಕಲ್ಯಾಣಿ ತರತಮ್ಯ ಭಾವದಿ || ಅರಿದು ಕೊಂಡಾಡುವ ಚಿಂತೆ ಇರಲಿ | ವಿ- | ಸ್ಮರಣೆಯಾಗದಂತೆ ವಿಜಯವಿಠ್ಠಲನ್ನ ನಿರುತ ಪೊಂದಿಸು ||3||

Thoughts & Reflections

0

No reflections shared yet. Be the first to share your thoughts!

Share your thought