Bhasaka
← Back to home

ಭೀಮ ಶಾಮ ಕಾಮಿನಿಯಾದನು

Author: ವಿಜಯದಾಸCategory: ಶ್ರೀಮಧ್ವಾಚಾರ್ಯ
ಭೀಮ ಶಾಮ ಕಾಮಿನಿಯಾದನು ಭೀಮ ಶಾಮ ಕಾಮಿನಿಯಾಗಲು ಕಾಮನ ಪತಿ ಪುಲೋಮ ಜಿತುವಿನ ಕಾಮಿನಿ ಸಕಲ ವಾಮ ಲೋಚನೆಯ- ರಾಮೌಳಿ ಕೂಗುತಲೊಮ್ಮನದಿ ಪಾಡೆ ದಾಯವಾಡಿ ಸೋತು ರಾಯ ಪಾಂಡವರು ನ್ಯಾಯದಿಂದ ಸ್ವಾಮಿಯ ಸೇವೆಯೆಂದು ಕಾಯದೊಳಗೆ ಅಸೂಯೆಪಡದಲೆ ಮಾಯದಲ್ಲಿ ವನವಾಯಿತೆಂದು ರಾಯ ಮತ್ಸ್ಯನಾಲಯದೊಳು ತಮ್ಮ ಕಾಜು ವಡಗಿಸಿ ಅಯೋನಿಜೆ ದ್ರೌಪ- ದೀಯ ವಡಗೂಡಿ ಆಯಾಸವಿಲ್ಲದೆ ಅಯ್ವರು ಬಿಡದೆ ತಾವಿರಲು ||1|| ಬಾಚಿ ಹಿಕ್ಕುವ ಪರಿಚಾರತನದಲಾ ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ ಆಚರಣೆಯಿಂದ ಯಾಚಕರಂದದಿ ವಾಚವಾಡಿ ಕಾಲೋಚಿತಕೆ ನೀಚರಲ್ಲಿಗೆ ಕೀಚಕನಲ್ಲಿಗೆ ಸೂಚಿಸಲು ಆಲೋಚನೆಯಿಂದಲಿ ನಾಚಿಕೆ ತೋರುತಲಾ ಚೆನ್ನೆ ಪೋಗಲು ನೀಚ ಖೂಳ ಕರ ಚಾಚಿದನು ||2|| ಎಲೆಗೆ ಹೆಣ್ಣೆ ನಿನ್ನೊಲುಮೆಗೆ ಕಾಮನು ಕಳವಳಿಸಿದ ನಾ ಗೆಲಲಾರೆನಿಂದು ವಲಿಸಿಕೊ ಎನ್ನ ಲಲನೆಯ ಕರುಣಾ- ಜಲಧಿಯೆ ನಾರೀ ಕುಲಮಣಿಯೆ ಬಳಲಿಸದಲೆ ನೀ ಸಲಹಿದಡೇ ವೆ- ಗ್ಗಳೆಯಳ ಮಾಡಿಪೆನಿಳೆಯೊಳೆನ್ನೆ-ಆ- ಖಳನಾ ಮಾತಿಗೆ ತಲೆದೂಗುತಲಿ ಅ- ನಿಳಜನೆನ್ನ ನೀ ಸಲಹೆಂದ ||3|| ಮೌನಿ ದ್ರೌಪದಿ ಮೌನದಲ್ಲಿ ಹೀನನಾಡಿದಾ ಊನ ಪೂರ್ಣಗಳು ಮನೋಭಾವವ ಧೇನಿಸಿ ನೋಡುತ್ತ ಹೀನಕೆ ತಿಳಿದಳು ಮನದಲಿ ದೀನವತ್ಸಲ ಕರುಣವು ಮೀರಿತು ಕಾನನದೊಳ್ಕಣ್ಣು ಕಾಣದಂತಾಯಿತು ಏನು ಮಾಡಲೆಂದು ಜಾಣೆಯು ಚಿಂತಿಸಿ ಅನಿಲಗೆ ಬಂದು ಮ-ಣಿದಳು||4|| ಚೆಲ್ವೆ ಕಂಗಳೇ ನಿಲ್ಲೆ ನೀ ಘಳಿಗೆ ಸಲ್ಲದೆ ಆತನ ಹಲ್ಲನು ಮುರಿದು ಹಲ್ಲಣವ ಹಾಕಿ ಕೊಲ್ಲುವೆ ನಾನೀಗ ತಲ್ಲಣಿಸದಿರೇ ಗೆಲ್ಲುವೆನೆ ಪುಲ್ಲನಾಭ ಸಿರಿನಲ್ಲನ ದಯವಿ- ದ್ದಲ್ಲಿಗೆ ಬಂದಿತು ಎಲ್ಲ ಕಾರ್ಯಗಳ ಸಲ್ಲಿಸಿ ಕೊಡುವನು ಬಲ್ಲಿದ ನಮಗೆ ಮಲ್ಲಿಗೆ ಮುಡಿಯಾ ವಲ್ಲಭಳೆ ||5|| ಎಂದ ಮಾತಿಗಾನಂದ ಮಯಳಾಗಿ ಬಂದಳಾ ಖಳನ ಮಂದಿರದೊಳು ನೀ- ನೆಂದ ಮಾತಿಗೆ ನಾನೊಂದನು ಮೀರೆನು ಎಂದು ಕಪಟ ಸೈರಂಧಿರಿಯೂ ಕುಂದಧಾಭರಣವ ತಂದು ಕೊಡಲು ಆ- ನಂದದಿಂ ಪತಿಯ ಮುಂದೆ ತಂದಿಟ್ಟಳು ಮಂದರೋದ್ಧರನ ಚಂದದಿ ಪೊಗಳುತ ಇಂದು ಸುದಿನವೆಂದ ಭೀಮ||6|| ಉಟ್ಟ ಪೀತಾಂಬರ ತೊಟ್ಟ ಕುಪ್ಪಸವು ಇಟ್ಟತಿ ಸಾದಿನ ಬಟ್ಟು ಫಣಿಯಲ್ಲಿ ಕಟ್ಟಿದ ಮುತ್ತಿನ ಪಟ್ಟಿಸ ಕಿವಿಯಲ್ಲಿ ಇಟ್ಟೋಲೆ ತೂಗಲು ಬಟ್ಟ ಕುಚ ಘಟ್ಟಿ ಕಂಕಣ ರ್ಯಾಗಟೆ ಚೌರಿ ಅ- ದಿಟ್ಟಂಥ ಈರೈದು ಬೆಟ್ಟುಗಳುಂಗರ ಮುಟ್ಟೆ ಮಾನೆರಿ ದಟ್ಟಡಿವೊಪ್ಪತಿ ಕಟ್ಟುಗ್ರದ ಜಗ ಜಟ್ಟಿಗನು ||7|| ತೋರ ಮೌಕ್ತಿಕದ ಹಾರ ಸರಿಗೆ ಕೇ ಯೂರ ಪದಕ ಭಂಗಾರ ಕಾಳಿಸರ ವೀರ ವಿದ್ರುಮದ ಭಾಪುರಿ ಉ- ತ್ತಾರಿಗೆ ವರ ಭುಜಕೀರುತಿಯು ಮೂರೇಖೆಯುಳ್ಳ ಉದಾರ ನಾಭಿವರ ನಾರಿ ನಡು ಉಡುಧಾರ ಕಿಂಕಿಣಿ ಕ- ಸ್ತೂರಿ ಬೆರಸಿದ ಗೀರುಗಂಧವು ಗಂ- ಬೂರ ಲೇಪ ಶೃಂಗಾರದಲಿ||8|| ವಂಕಿ ದೋರ್ಯವು ಕಂಕಣ ಒಮ್ಮೆಯೀ- ನಾಂಕ ಚಾಪ ಭ್ರೂ ಅಲಂಕಾರ ಭಾವ ಪಂಕಜಮಾಲೆ ಕಳಂಕವಿಲ್ಲದಲೆ ಸಂಕಟ ಕಳೆವ ಪಂಕಜಾಂಘ್ರಿ ಝಂಕಾರಕೆ ಲೋಕ ಶಂಕಿಸೆ ನಾನಾ- ಲಂಕಾರದ ಹೊಸ ಅಂಕುರ ವೀರ- ಕಂಕಣ ಕಟ್ಟಿದ ಬಿಂಕದಿಂದಲಾ- ತಂಕವಿಲ್ಲದೆಲೆ ಕಂಕಾನುಜ ||9|| ಕಂಬು ಕೊರಳು ದಾಳಿಂಬ ಬೀಜ ದಂತ ದುಂಬಿಗುರುಳು ನೀಲಾಂಬುದ ಮಿಂಚೆಂ- ದೆಂಬ ತೆರದಲಾ ಅಂಬಕದ ನೋಟ ತುಂಬಿರೆ ಪವಳ ಬಿಂಬಾಧರ ಜಂಬೀರ ವರ್ಣದ ಬೊಂಬೆಯಂತೆಸೆವ ತಾಂಬೂಲ ಗಿಳಿಯೆಂಬ ಗಂಭೀರ ಪುರುಷನು ಹಂಬಲಿಸಿದ ತಾ ಸಂಭ್ರಮದಿ ||10|| ಸಂಧ್ಯಾದೇವಿಯೊ ಇಂದ್ರನ ರಾಣಿಯೊ ಚಂದ್ರನ ಸತಿಯೋ ಕಂದರ್ಪನಾಕರ- ದಿಂದ ಬಂದ ಅರವಿಂದದ ಮೊಗ್ಗೆಯೊ ಅಂದ ವರ್ಣಿಪರಾರಿಂದಿನಲಿ ಇಂದು ರಾತ್ರಿ ಇದೆ ಎಂದಮರಮುನಿ ಸಂದೋಹ ಕೊಂಡಾಡೆ ಇಂದುಮುಖಿಯೊಡ ನಂದು ತಾ ನಾಟ್ಯದ ಮಂದಿರಕೆ ನಗೆ- ಯಿಂದ ಬಂದ ಕುಂತಿನಂದನನು||11|| ಭಂಡ ಉಡಿಯಲಿ ಕೆಂಡವೊ ಪರರ ಹೆಂಡರ ಸಂಗ ಭೂಮಂಡಲದೊಳೆನ್ನ ಗಂಡರು ಬಲು ಉದ್ದಂಡರು ನಿನ್ನನು ಕಂಡರೆ ಬಿಡರೋ ಹಂಡಿಪರೋ ಲಂಡ ಬಾಯೆಂದು ಮುಕೊಂಡು ಕೈದುಡುಕಿ ಅಂಡಿಗೆಳೆದು ಅಖಂಡಲನ ಭಾಗ್ಯ ಉಂಡು ತೀರಿಸೆನ್ನೆ ಮಂಡೆ ಮೊಗ ಗಲ್ಲ ಡುಂಡು ಕುಚ ಮುಟ್ಟಿ ಬೆಂಡಾದನು ||12|| ಸಾರಿಯಲ್ಲ ಮಕಮಾರಿಯಿದೆನುತ ಶ- ರೀರ ವತಿ ಕಠೋರವ ಕಂಡು ಜ- ಝಾರಿತನಾಗಿ ನೀನಾರು ಪೇಳೆಂದು ವಿ- ಕಾರದ್ಯಬ್ಬರಿಸಿ ಕೂರ್ರನಾಗಿ ತೋರು ಕೈಯೆಂದು ಸಮೀರನು ಎದ್ದು ವಿ ಚಾರಿಸಿಕೋ ಎನ್ನ ನಾರಿತನವೆಂದು ವೀರ ಮುಷ್ಟಿಯಿಂದ್ಹಾರಿ ಹೊಡೆಯಲು ಕ್ರೂರನು ರಕ್ತವ ಕಾರಿದನು ||13|| ಹಾರಿ ಹೊಯ್ಯತಲೆ ಮೋರೆಲಿದ್ದ ಕಳೆ- ಸೂರೆಯಾಯಿತು ಪರನಾರೇರ ಮೋಹಿಸಿ ಪಾರಗಂಡವರುಂಟೆ ಶರೀರದೊಳಿದ್ದ ಮಾರುತೇಶ ಹೊರಸಾರಿ ಬರೆ ಧೀರ ಭೀಮರಾಯ ಭೋರಿಡುತ ಹಾರಿ ಕೋರ ಮೀಸೆಯನೇರಿಸಿ ಹುರಿಮಾಡಿ ನಾರಿಮಣಿ ಯಿತ್ತ ಬಾರೆಂದು ಕರೆದು ಸಾರಿದನು ನಿಜಾಗಾರವನು ||14|| ಸರಸವು ನಿನಗೆ ವಿರಸವು ಆಯಿತು ಕರೆಸೆಲೊ ಈ ಪುರದರಸಾ ಕಳ್ಳನ ನರಸಿಂಹನ ನಿಜ ಅರಸಿಗೆ ಮನವನು ವೆರೆಸಿದ್ಯೋ ಮಂದರ ಅರಸನೆ ಅರಸಿ ನೋಡುತಿರೆ ವರೆಸಿದನಾ ಜೀವ ದೊರಸೆಯ ಖೂಳನ ಬೆರೆಸಿ ಸವಾಂಗ ವಿರಿಸಿ ಅಲ್ಲಿಯೆ ಸಿರಿ ವಿಜಯವಿಠ್ಠಲ ಅರಸಿನ ಲೀಲೆಯ ಸ್ಮರಿಸುತಲಿ ||15||

Thoughts & Reflections

0

No reflections shared yet. Be the first to share your thoughts!

Share your thought