Bhasaka
← Back to home

ಭೂರಮಣನೆ ಕಾಯೋ ನಿತ್ಯ

Author: ವಿಜಯದಾಸCategory: ಶ್ರೀಕೃಷ್ಣ
ಭೂರಮಣನೆ ಕಾಯೋ ನಿತ್ಯ ಸಂಸಾರವೆ ಸುಖವೆಂದು ಹಾರಯಿಸಿ ಬಾಳುವಾ | ನರನ ಉದ್ಧಾರ ಮಾಡುವುದು ಕಂಗಳಿಂದಲಿ ಪರರ ಮನೆಯ ಅಂಗನೆಯರ ನೋಡಿ ಅಂಗಸಂಗವ ಬಯಸಿ ಪಾಪಕ್ಕೆ ಹಿಂಗದೆ ಗುರಿಯಾದೆ ||1|| ಜಿಹ್ವೆಯನು ಪಿಡಿದು ನಿಲಿಸದೆ ವಿಹ್ವಲನಾಗಿ ಬಹುರಸ ಸಂಹ್ವತಿಯ ಮೆದ್ದು ಪುಣ್ಯದಾ ಗಹ್ವರವು ಮರಿಯದೆ ||2|| ನಾಸಿಕಕೊನೆಯಿಂದ ಅನರ್ಪಿತ ವಾಸನೆ ಕೈಕೊಂಡು ಲೇಸಾಗಿ ಮನವುಬ್ಬಿ ನಲಿವುತ ದೇಶದೊಳಗೆ ಮೆರೆದೆ ||3|| ಮುಪ್ಪಾಗುವತನಕ ಸುಖದಲ್ಲಿ ಅಪ್ಪಿದೆ ನಾರಿಯರ ಒಪ್ಪಿದ ಧರ್ಮಗಳ ಖಳರಿಗೆ ಒಪ್ಪಿಸಿದೆನೊ ಹರಿಯೇ ||4|| ದುಷ್ಟರಾಡುವ ವಾಕ್ಯ ಕೇಳುತ್ತ ಅಟ್ಟಹಾಸವ ಮಾಡಿ ಕೆಟ್ಟು ಪೋಗುವೆನೆಯ್ಯಾ ವಿಜಯವಿಠ್ಠಲ ನೀನೆ ||5||

Thoughts & Reflections

0

No reflections shared yet. Be the first to share your thoughts!

Share your thought