Bhasaka
← Back to home

ನೀ ಮಾಯೆಯೊಳಗೋ

Author: ಕನಕದಾಸCategory: ಶ್ರೀಕೃಷ್ಣRaaga: ಪಂತುವರಾಳಿTaala: ಝಂಪೆತಾಳ
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ನಿನ್ನೊಳು ದೇಹವೋ || ಬಯಲು ಆಲಯದೊಳಗೋ ಆಲಯವು ಬಯಲೊಳಗೋ ಬಯಲು ಆಲಯವೆರಡೂ ನಯನದೊಳಗೋ | ನಯನ ಬುದ್ದಿಯ ಒಳಗೋ ಬುದ್ದಿ ನಯನದ ಒಳಗೋ ನಯನ ಬುದ್ಧಿಗಳೆರಡೂ ನಿನ್ನೊಳಗೋ ಹರಿಯೇ || ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ ಸವಿಯು ಸಕ್ಕರೆಯೆರಡೂ ಜಿಹ್ವೆಯೊಳಗೋ | ಜಿಹ್ವೆ ಮನಸಿನ ಒಳಗೋ ಮನಸು ಜಿಹ್ವೆಯ ಒಳಗೋ ಜಿಹ್ವೆ ಮನಸುಗಳೆರಡೂ ನಿನ್ನೊಳಗೋ ಹರಿಯೇ || ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ ಕುಸುಮಗಂಧಗಳೆರಡೂ ಘ್ರಾಣದೊಳಗೋ | ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ ||

Thoughts & Reflections

0

No reflections shared yet. Be the first to share your thoughts!

Share your thought