Bhasaka
← Back to home

ಮಂಗಳಂ ಪ್ರಧಾನ ಮಾರುತಗೆ

Author: ವಿಜಯದಾಸCategory: ಶ್ರೀಮಧ್ವಾಚಾರ್ಯ
ಮಂಗಳಂ ಪ್ರಧಾನ ಮಾರುತಗೆ ಮಂಗಳಂ ಪಾವನ ಮೂರುತಿಗೆ | ಮಂಗಳಂ ತ್ರಿವಿಧ ಸತ್ಕೀರ್ತಿಗೆ | ಮಂಗಳಂ ಸದ್ಗುಣ ಕೀರ್ತಿಗೆ ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ | ಚಿಕ್ಕವನಾಗಿ ಪುರಪೊಕ್ಕವಗೆ || ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ | ನಿಕ್ಕಿಸಿದರಣದ ವಿಷ ಭೋಕ್ತನಿಗೆ ||1|| ವೃಕೋದರ ಭೀಮಗೆ ವಿಶೋಕನೊಡೆಯಗೆ | ಬಕ ಜರಾಸಂಧ ಕೀಚಕ ವಧೆ ಮಾಡಿದಗೆ || ಸಕಲ ದಳದೊಳಗೆ ನಾಯಕನೇ | ನೀ | ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ ||2|| ಒಂದೆ ಅಕ್ಷರದಿಂದ ನಂದ ಕೊಡುವವನಿಗೆ ಒಂದೆರಡು ಮೂರಾರು ಮುರಿದವಗೆ || ಒಂದೆ ದೈವ ನಮ್ಮ ವಿಜಯವಿಠ್ಠಲ ಕೃಷ್ಣನ್ನ | ವಂದಿಸುವ ಶ್ರೀಮದಾನಂದತೀರ್ಥಗೆ ||3||

Thoughts & Reflections

0

No reflections shared yet. Be the first to share your thoughts!

Share your thought