Bhasaka
← Back to home

ಮಂಗಳಂ ಮಹಾಗಂಗೆ

Author: ವಿಜಯದಾಸCategory: ಶ್ರೀಗಂಗೆ
ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ | ಮಂಗಳಂ ಬಲುದುರಿತ ಸಂಹಾರಿಗೆ | ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ ಮಂಗಳಂ ಕುಸುಮ ಚಿತ್ರಹಾರಿಗೆ ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ | ಪಾಣಿಗೆ ಗಂಭೀರ ಗುಣಶ್ರೇಣಿಗೆ | ತ್ರಾಣಿಗೆ ಕೋಕಿಲವಾಣಿಗೆ ಯಾದವನ | ರಾಣಿಗೆ ಮಣಿಹೇಮ ಭೂಷಣೆಗೆ ||1|| ಖ್ಯಾತಿಗೆ ತ್ರಿಲೋಕ ಮಾತೆಗೆ ಯ | ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ | ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ | ದೂತಿಗೆ ಅಮಿತ ಗುಣ ಪ್ರತಾಪಿಗೆ || ||2|| ಚನ್ನಿಗೆ ನಾರಿಕುಲರನ್ನಿಗೆ ಭಾಗ್ಯ ಸಂ | ಪನ್ನಿಗೆ ಸಗರಕುಲ ಪಾವನ್ನಿಗೆ | ಕಣ್ಣಿಗೆ ಪೊಳೆವ ಪ್ರಸನ್ನಿಗೆ ಸೀತಾ ಸು | ವರ್ನಿಗೆ ವಿಜಯವಿಠ್ಠಲ ಕನ್ನಿಗೆ ||3||

Thoughts & Reflections

0

No reflections shared yet. Be the first to share your thoughts!

Share your thought