Bhasaka
← Back to home

ಮಂತ್ರಾಲಯನಿವಾಸ ಉತ್ತಮ ಹಂಸ

Author: ವಿಜಯದಾಸCategory: ಶ್ರೀಗುರು ರಾಘವೇಂದ್ರ
ಮಂತ್ರಾಲಯನಿವಾಸ ಉತ್ತಮ ಹಂಸ | ಸಂತಾಪ ಪರಿಹರಿಸ ಕೊಡು ಎನಗೆ ಲೇಸ ಯತಿಗಳ ಶಿರೋರನ್ನ ಯೋಗಸಂಪನ್ನ | ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ || ನುತಿಸುವೆ ಭಕ್ತಿಯಲಿ ಬಿಡದೆ | ಮುಕುತಿಯಲಿ ಸತತಾನಂದದಲಿಪ್ಪ ||1|| ಕಪಿಲ ತೀರ್ಥದಲಿ ಶರಣ ಶುದ್ಧಿಯಲ್ಲಿ | ತಪವ ಮಾಡುವ ಜ್ಞಾನಿ ಸೌಮ್ಯಜ್ಞಾನಿ || ಜಪಶೀಲ ಗುಣ ಗಣಾಂಬುಧಿ ಪುಣ್ಯದ ಬುದ್ಧಿ ಕೃಪೆಮಾಡಿ ಕೊಡು ಗುರುವೆ ಶಿಷ್ಯಸುರತರುವೆ ||2|| ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ | ಶಮೆದಮೆಯಲ್ಲಿ ಉಳ್ಳ ಮಹಿಮೆಯಾ || ನಮಗೆ ಪೇಳುವೆ ವೇದಬಲ್ಲ ವಿನೋದ | ಸುಮನ ಸುಗುಣವ ಮೆಚ್ಚೆ ದುರ್ಮತಕೆ ಕಿಚ್ಚೆ ||3|| ಕಾಶಿ ಸೇತುವೆ ಮಧ್ಯೆ ಮೆರೆವೇ ಜನರಲ್ಲಿ | ಭೇದ ವಿದ್ಯಾ ಸಜ್ಜನಕೆ ತಿಳಿಸು ಮನಸು ನಿಲ್ಲಿಪೆ || ಪೋಷಿಸುವೆ ಅವರ ಅಟ್ಟುವ ಮಹದುರ | ದೋಷವ ಕಳೆವಂಥ ವಿಮಲ ಶಾಂತ4 ವರಹಜ ತೀರದಲ್ಲಿದ್ದ ಸುಪ್ರಸಿದ್ದ | ಮರುತ ಮತಾಂಬುಧಿ ಸೋಮ ನಿಸ್ಸೀಮ || ನರಸಿಜಾಪತಿ ನಮ್ಮ ವಿಜಯವಿಠ್ಠಲನಂಘ್ರಿ | ಸ್ಮರಿಸುವ ಸುಧೀಂದ್ರ ಸುತ ರಾಘವೇಂದ್ರ ||5||

Thoughts & Reflections

0

No reflections shared yet. Be the first to share your thoughts!

Share your thought