Bhasaka
← Back to home

ಮಗನೆಂದೆಂಬುವ ಇನ್ನು ಮತ್ತಾವನೊ

Author: ವಿಜಯದಾಸCategory: ಶ್ರೀಕೃಷ್ಣ
ಮಗನೆಂದೆಂಬುವ ಇನ್ನು ಮತ್ತಾವನೊ ಜಗದೊಳಗೆ ನಿನ್ನ ವಿನಾ ಕಾಣೆಯೆಲ್ಲಿ ರಕ್ತ ಶುಕ್ಲ ಮಿಶ್ರವಾದ ಸಮ್ಮಂಧ ವಿಷ_ ಭುಕ್ತನಾಗಿದ್ದ ಸಂಸಾರದೊಳಗಾ ಸಕ್ತತನದಲಿ ಇಪ್ಪ ಎಂದಿಗೆಂದಿಗೆ ಇವನು ಮುಕ್ತಿ ಕೊಡುವನೇನೊ ಮುಂದೊಲಿದು ಕೊಂಡಾಡೆ||1|| ಪ್ರಕೃತಿ ಬದ್ಧನಾಗಿ ನಾನಾ ಜನುಮಗಳಲ್ಲಿ ವಿಕೃತಿಯ ಮಾಡುವ ಮದದಿಂದಲೀ ಸುಕೃತವನು ಮರೆದು ದೂರಾಗಿ ಸಂಚರಿಸುವ- ನುಕ್ರ ಮವಂದುಮಾಸ ಜನತೆ ಕ್ಯೆಡೆಯಿರದವ ||2|| ಪುತ್ರ ಉಳ್ಳರೆ ಅವಗೆ ಕಂಡಕಡೆ ತಿರುಗಿ ಉ- ನ್ಮತ್ತನಾಗಿ ಕೆಟ್ಟ ಗ್ರಾಸವನ್ನು ಹೊತ್ತಹೊತ್ತಿಗೆ ತಂದು ಹಾಕಬೇಕು ಸಾಕಿ ನಿತ್ಯದಲ್ಲಿ ಅವಗಾಗಿ ಕ್ಲೇಶಬಡಲಿ ಬೇಕು ||3|| ನಾಡೊಳಗೆ ನೀನೆ ಮಗನೆಂದವನ ಭಾಗ್ಯಕ್ಕೆ ಈಡುಗಾಣೆನು ಎಲ್ಲಿ ವಿಚಾರಿಸೆ ಕಾಡಿ ಬೇಡುವೆ ಮುನ್ನೆ ಪರಿಪರಿಬಾಧೆಬಡಿಸಿ ಕೂಡಿರುವೆ ಮುಕ್ತರೊಳು ಮುಕ್ತಿಗಳವಲ್ಲಿದೊ ||4|| ನಿನ್ನಂಥ ಮಗನ ಪಡದಮ್ಯಾಲೆ ಎನಗೆ ಅನ್ಯಚಿಂತೆಗಳಿಲ್ಲ ಚಿಂತಾಮಣೀ ಘನ್ನಮೂರುತಿ ನಮ್ಮ ವಿಜಯವಿಠ್ಠಲರೇಯ ಅನಂತಕಾಲಕ್ಕೆ ವಹಿಸುವ ದೇವ ||5||

Thoughts & Reflections

0

No reflections shared yet. Be the first to share your thoughts!

Share your thought