Bhasaka
← Back to home

ಮಧ್ವರಾಯರ ಕರುಣ ಪಡೆಯದವ

Author: ವಿಜಯದಾಸCategory: ಶ್ರೀಮಧ್ವಾಚಾರ್ಯ
ಮಧ್ವರಾಯರ ಕರುಣ ಪಡೆಯದವ ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು ಮಧ್ವಮತವೇ ಮತವು ಸಕಲ ಶ್ರುತಿ ಸಮ್ಮತವು | ಮಧ್ವರಾಯರ ಧ್ಯಾನ ಅಮೃತಪಾನ || ಮಧ್ವರಾಯರ ಲೀಲೆ ನವರತುನದಾ ಮಾಲೆ | ಮಧ್ವೇಶನಾ ಸ್ಮರಣೆ ಕುಲಕೋಟಿ ಉದ್ಧರಣೆ ||1|| ಮಧ್ವರಾಯರ ಕಥೆಯ ಕೇಳಲದು ದುರಿತ ಹತ | ಮಧ್ವರಾಯರ ಭಕುತಿ ಮಾಡೆ ಮುಕುತಿ || ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ | ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ ||2|| ಮಧ್ವರಾಯರ ದಾಸನಾದವನೆ ನಿರ್ದೋಷ | ಮಧ್ವರಾಯರ ಬಂಟ ಜಗಕೆ ನೆಂಟ || ಮಧ್ವರಮಣಾ ನಮ್ಮ ವಿಜಯವಿಠ್ಠಲನಾದ ಮಧ್ವೇಶನಾ ಕರುಣೆ ಪಡೆದವನೆ ಶರಣ ||3||

Thoughts & Reflections

0

No reflections shared yet. Be the first to share your thoughts!

Share your thought