Bhasaka
← Back to home

ಮನ್ನಿ ಮನ್ನಿಗೆ ಉಣ್ಣ ಬಂದಾ

Author: ವಿಜಯದಾಸCategory: ಶ್ರೀಕೃಷ್ಣ
ಮನ್ನಿ ಮನ್ನಿಗೆ ಉಣ್ಣ ಬಂದಾ | ತನ್ನವರೊಳಗಿದ್ದ ಸರ್ವ ಸಾರಭೋಕ್ತಾ ಭಕುತರಗೋಸುಗ ಭಕುತಿಯ ಕೈಕೊಂಡು ಕರುಣಾಂಬುಧಿ ಇಂದು ||1|| ಭೂವದರೊಳಗಿದ್ದು ದೈತ್ಯರ ಗೆದ್ದಂತೆ | ಆವಿಷ್ಣುವಾಗಿ ಮನ್ನಣೆಯ ಕೈಕೊಳುವಲಿ ||2|| ನಂಬಿದ ದಾಸರ್ಗೆ ಪ್ರಾರಬ್ಧ ಕರ್ಮವು | ಉಂಬೋದು ಬಿಡದಂದು ತದಾಕಾರ ರೂಪದಿ3 ಅವರವರ ಯೋಗ್ಯತೆ ಫಲ ಕೊಡುವೆನೆಂದು | ದಿವಿಜರ ಒಡಗೂಡಿ ದಿನ ಪ್ರತಿದಿನದಲ್ಲಿ ||4|| ತನ್ನ ಸಂಕಲ್ಪವು ಸಿದ್ಧಿ ಮಾಡುವೆನೆಂದು ಘನ್ನತೆಯಲಿ ನಮ್ಮ ವಿಜಯವಿಠ್ಠಲಸ್ವಾಮಿ ||5||

Thoughts & Reflections

0

No reflections shared yet. Be the first to share your thoughts!

Share your thought