Bhasaka
← Back to home

ಮನ್ನಿಸು ಮಾರಾರಿ ಮುದದಿಂದಲಿ

Author: ವಿಜಯದಾಸCategory: ಶ್ರೀಕೃಷ್ಣ
ಮನ್ನಿಸು ಮಾರಾರಿ ಮುದದಿಂದಲಿ ಎನ್ನ | ಬಿನ್ನಪವನೆ ಲಾಲಿಸಿ ಮುನ್ನೆ ಮಾಡಿದ ಯಿನ್ನು ದುರಿತಗಳನ್ನ ಹಾರಿಸಿ | ಎನ್ನನನುದಿನ ಅಮಿಶ್ರ ತತ್ವದಲಿ ಕಲಿ ವಿರಹಿತ ರುದ್ರ | ಹಮ್ಮಿನಿಂದಿತ್ತ ಸರ್ವವ ನೋಳ್ಪನೆ | ಬೊಮ್ಮನಾ ತತ್ವದಲಿ ಹೋಗಿಬರುವ ಪ್ರಬಲ್ಯ | ಉಮ್ಮೆಯರಸಾ ತಾಮಸ ಕಾರ್ಯದಧಿಪತಿ | ಒಮ್ಮೆ ಬಿಡದಲೆ ನರಹರಿಯ ನಾ | ಮಾಮ್ಮರತ ಮನದಲಿ ನೆನಸುವ ಸುಖದಿಂದಲಿ | ಅಮ್ಮಹಾ ವೈರಾಗ್ಯ ಭಾಗ್ಯವ | ಕಮ್ಮರದಿ ಕೊಡು ಕರುಣದಿಂದಲಿ ||1|| ನಂದಿವಾಹನ ನಾಗತಲ್ಪ ಕಲ್ಪಾಂತರ | ಚಂದಿರಮವ್ಯಾಳಿ ಚರ್ಚಕನಾಯಕ | ಕುಂದುಗೊರಳ ನೀಲಕಂಠಾಗಮನೈಯ್ಯ | ವಂದೀರೈದು ಸ್ಥಾನ ವಾಸವಾದ್ಯ || ಇಂದು ನಿನ್ನ ಪಾದದ್ವಂದ್ವ ನಂಬಿದೆ | ನಿಂದಕರ ಸಂಗತಿ ಸಂಗತಿಯಲಿಡದಲೇ | ಪೊಂದಿಸೋಮ ಜನರೊಳಗೆ ಎರ | ಡೊಂದುಪುರ ವಿನಾಶಾ ಈಶಾ ||2|| ತುಂಗ ಪೊಂಪಾಕ್ಷೇತ್ರ ನಿಲಯ ನಿಖಿಳ ಶಾಂತ | ತುಂಗ ಮಹಿಮಾ ಶಂಭೋ ನಿಟಿಲನೇತ್ರ | ಮಂಗಳಾಂಗ ಶ್ರೀ ವಿಜಯವಿಠ್ಠಲನ | ಹಿಂಗದೆ ಮನದಲ್ಲಿ ನೆನೆಸುವರ | ಸಂಗಸುಖ ಸರ್ವದಾ ಸುಜನಪಾಲಕ | ಪೊಂಗರ್ಭಸುತ ಪತಿತ ಪಾವನ ||3||

Thoughts & Reflections

0

No reflections shared yet. Be the first to share your thoughts!

Share your thought