Bhasaka
← Back to home

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ

Author: ವಿಜಯದಾಸCategory: ಶ್ರೀಕೃಷ್ಣ
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ ಊದುವ ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ ||1|| ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ ||2|| ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ ||3|| ಆನಂದ e್ಞÁನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಕಾನನ ದಹಿಸುವ ಪಾವಕ ಪದವೊ ||4|| ತ್ರಿಜಗದಧಿಕ ಪಾವನನೊ ಪಂ-| ಕಜ ನೇತ್ರೆಯ ನಾಯಕನೊ || ಅಜಭವಾದಿಗಳ ಜನಕನೊ ನಮ್ಮ | ವಿಜಯವಿಠ್ಠಲ ಯದುಕುಮಾರಕನೊ ||5||

Thoughts & Reflections

0

No reflections shared yet. Be the first to share your thoughts!

Share your thought