Bhasaka
← Back to home

ಮಾಧವನ ನೋಡಿ ಸಂಪಾದಿಸಿದೆ

Author: ವಿಜಯದಾಸCategory: ಶ್ರೀಕೃಷ್ಣ
ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು | ಆದರಪೂರ್ವಕದಿಂದಲಿ ಮಾಧುರ್ಯವಾದ ಮನ | ಸಾಧುಗಳ ಸಂಗತಿ ಭೇದ ಪಂಚಕ ಪೂರ್ಣಬೋಧರ ಮತವಿಡಿದು ಮಡುವಿನೊಳು ಕರಿ ಮೊರೆ ಇಡಲು ಕೇಳುತ ನಕ್ರನ | ಕಡಿದು ಕರುಣದಿಂದಲಿ ತಡಿಯದಲೆ ಜಡುಮತಿಯ | ಬಿಡದೆ ಉದ್ಧರಿಸಿದ ಒಡೆಯ ಪುಣ್ಯನಿಧಿಗೆ ಕಡು ಮೆಚ್ಚಿ ಬಂದವನ ||1|| ಮರಣಕಾಲದಿ ಭಯಂಕರವಾದ ಯಮನ ದೂ | ತರನ ನೋಡಿ ಕರಿಯಲು | ಪರಮ ವೇಗದಿಂದ ಪುರಕೆ ಕರಿಸಿದ ಉಭಯ ಶರಧಿ ಮಧ್ಯದಲ್ಲಿ | ಮೆರೆವ ಮಧುಸೂದನನ ||2|| e್ಞÁನ ಪಾಪಿಯ ಸ್ನಾನ ಆನಂದದಲಿ ಮಾಡಿ | ಹೀನ ದೋಷಗಳ ಕಳೆದು | e್ಞÁನವಧಿಕವಾದ ಗುರುಗಳ ಕೃಪೆಯಿಂದ | ಶ್ರೀ ವಿಜಯವಿಠ್ಠಲ ಸೇತುವಾಸನಾ ||3||

Thoughts & Reflections

0

No reflections shared yet. Be the first to share your thoughts!

Share your thought