Bhasaka
← Back to home

ಮಾನ ನಿನ್ನದು ಅಭಿಮಾನ ನಿನ್ನದು

Author: ವಿಜಯದಾಸCategory: ಶ್ರೀಕೃಷ್ಣ
ಮಾನ ನಿನ್ನದು ಅಭಿಮಾನ ನಿನ್ನದು | ದಾನವಾಂತಕ ರಂಗ ದಯಮಾಡಿ ಸಲಹೊಪ ಒಡೆಯಳು ಕುಳಿತಿರಲು ತೊತ್ತಿನ ಮುಂದಲಿಯ | ಪಿಡಿದೆಳೆದೊಯ್ದು ಘಾಸಿಯನು ಮಾಡಿ || ಅಡಿಗಡಿಗೆ ಅಪಮಾನಗೊಳಿಸಿ ಕೊಲೆ ಮಾಡಿದರೆ | ಒಡತಿಗಲ್ಲದೆ ಕೊರತೆ ಅವಳಿಗೇನಯ್ಯಾ||1|| ಸದನದೊಳು ಪುರುಷನು ಇರುತಿರಲು ಹೆಂಡತಿಯ | ಎದೆಯ ಮೇಲಿನ ಸೆರಗು ಸೆಳೆದುಕೊಂಡು|| ಒದೆದು ಕೈ-ಕಾಲಿಂದ ಮಾನಹಾನಿ ಮಾಡಿದರೆ | ಅದು ಪುರುಷಗಲ್ಲದೆ ವಧುವಿಗೇನಯ್ಯಾ ||2|| ಪಿತನ ಬಳಿಯಲಿ ಮಗನು ಕುಳಿತಿರಲು ವರ ಮನುಜ | ಖರೆಯಿಂದ ಕೆಡಹಿ ಪಾಶದಲಿ ಕಟ್ಟಿ ಬಿಗಿಯಾಗಿ || ಮತಿಗೆಡಿಸಿ ನಾನಾ ಪ್ರಕಾರ ಭಂಗವ ಮಾಡೆ | ಕ್ಷತಿ ತಂದೆಗಲ್ಲದೆ ಕುವರಗೇನಯ್ಯಾ||3|| ಆಳುವ ದೊರೆಯ ಸಮ್ಮುಖದಲಿ ಬಂಟನಿರೆ | ಖೂಳರು ಬಂದು ಶಸ್ತ್ರವನು ತೆಗೆದು || ಕೀಳು ಮಾಡಿ ಬಂಟನ ಅಭಿಮಾನ ಕೊಂಡರೆ ಏಳಲವು ಅರಸಗಲ್ಲದೆ ಬಂಟನಿಗೇನು ||4|| ಸತ್ಯ ಸಂಕಲ್ಪ ಸರ್ಮೋತ್ತಮ ಸುರಪಾಲ | ಅತ್ಯಂತ ಪಾಲಸಾಗರ-ಸದನನೆ || ಭೃತ್ಯರಪಮಾನ ಅಭಿಮಾನ ನಿನ್ನದು ಸದಾ | ನಿತ್ಯ ತೃಪ್ತನೆ ಸಿರಿ ವಿಜಯವಿಠ್ಠಲರೇಯಾ ||5||

Thoughts & Reflections

0

No reflections shared yet. Be the first to share your thoughts!

Share your thought