Bhasaka
← Back to home

ಮುಕುತಿ ತಮಸು ಎರಡಿಲ್ಲೆ ಕಂಡ್ಯಾ

Author: ವಿಜಯದಾಸCategory: ಇತರೆ
ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ ಹರಿಯ ಗುಣಂಗಳ ಕೊಂಡಾಡುತ ಪರಮ ಉತ್ತಮರು ಬರಲು ಬನ್ನಿ ಬನ್ನೆಂದು ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ ||1|| ನಾನು ನೀನು ಎಂದು e್ಞನವನೆ ತಿಳಿಕೊಂಡು ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ ಈ ನಾಡಿನೊಳಗಿವ ಹೀನವನು ಎಂಬರ್ಥ ಈ ನುಡಿ ಎನಿಸಿಕೊಂಬುದೆ ತಮಸು ||2|| ಒಂದರೊಳಾನಂತ ಅನಂತದಲಿ ಒಂದು ಒಂದೊಂದು ಅನಂತ ಹರಿಪ್ರೇರಕ ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ ನಿಂದಕವಾಗಿ ಬಾಳುವದೆ ಮುಕ್ತಿ ||3|| ಅನ್ನದಾ ಸಮಯ ಇಲ್ಲದೆ ಕಂಡಲ್ಲಿ ತಿನ್ನಲೋಡಿ ಸಮಯವೆನ್ನದೆ ಅನ್ಯರ ಬದುಕ ಪಹರಿಸುವ ಖಲು ಗನ್ನ ಫಾತಕನೆನಿಸಿಕೊಂಬುವದೆ ತಮಸು ||4|| ಮೀಸಲಾ ಮನದಲ್ಲಿ ವಾಸುದೇವನ ನಿಜ ವಾಸರದಲ್ಲಿ ಜಾಗರಾ ಮಾಡುವಾ ಆಶೆಬಡಕನಲ್ಲ ದೇಶದೊಳಗೆ ಹರಿ ದಾಸನೆಂದು ಪೇಳುವುದೆ ಮುಕ್ತಿ ||5|| ವ್ರತವಿಲ್ಲ ವಾವಿಲ್ಲ ಮತಿ ಮೊದಲು ಇಲ್ಲಾ ಕಥಾಶ್ರವಣ ಒಂದು ಕೇಳಲಿಲ್ಲ ಪಿತ ಮಾತರನ್ನ ಬೊಗಳುವ ನಾಯಿ ಕು ತ್ಸಿತನು ಎಂದೆನಿಸುವದೆ ತಮಸು ||6|| ಗುಣ ಒಳ್ಳೇದು ನೀತಿ ಮನ ಒಳ್ಳೇದು ಅಜ ತೃಣ ಜೀವಾದಿಯ ಭೇದಬಲ್ಲನಿವ ಗಣನೆಮಾಡ ವಿಜಯವಿಠ್ಠಲನಲ್ಲದೆ ಕ್ಷಣ ಹೀಗೆ ಎಂದೆನಿಸುವದೆ ಮುಕ್ತಿ ||7||

Thoughts & Reflections

0

No reflections shared yet. Be the first to share your thoughts!

Share your thought