Bhasaka
← Back to home

ಮುಖ್ಯಪ್ರಾಣನೀತಾ ನಮಗೆ

Author: ವಿಜಯದಾಸCategory: ಶ್ರೀಕೃಷ್ಣ
ಮುಖ್ಯಪ್ರಾಣನೀತಾ ನಮಗೆ | ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ | ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ ನಿಗಮವೇದ್ಯನೀತಾ ನಂಬಿಕೆಯನೀವ ಚರಣ | ಯುಗಳ ಪೂಜಿಪಾ ದುರಿತ ರಾಗಗಳ ಕಳೆನೀತಾ | ವಿಗಡ ವಿಷವನುಂಡನೀತಾ | ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ | ಅಗಣಿತಾದವಿದ್ಯನೀತಾ ||1|| ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ | ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ | ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ | ಮೊಗದವನಾಗಿ ವಾನರ ಬಲವ | ನಗವ ತಂದೆತ್ತಿದವನೀತಾ ||2|| ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ | ಕರೆದು ಕೊಡುವ ಚತುರ ವಿಧದ | ಪರಮ ಮಂಗಳ ಪದದಿ ಭವದ | ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ | ಮರುತಾವತಾರನೀತಾ ತನ್ನ | ಶರಣ ಜನರ ಪೊರೆವನೀತಾ ||3|| ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ | ವಸುಧಿ ಜನರ ಪುಣ್ಯದಂತೆ ಸಮ ವಿಷಮ ನೋಡಿ ಪೊರೆವನೀತಾ | ಅಸುರ ಲಿಂಗಭಂಗವ ಮಾಡಿ | ಬೆಸನೆ ಮತವ ಕಟ್ಟುವನೀತಾ | ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ ||4|| e್ಞÁನ ಪೂರ್ಣನೀತಾ ಶ್ರೀಮದಾನಂದತೀರಥನೀತಾ | ದಾನ ಧರ್ಮ ಪ್ರೇರಕನೀತಾ | ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ | ನಮಗೇನೇನು ಕೊಡುವನೀತಾ | ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ ||5||

Thoughts & Reflections

0

No reflections shared yet. Be the first to share your thoughts!

Share your thought