Bhasaka
← Back to home

ಮುನಿಜನರ ನೆನೆಸಿ ಜನರೂ

Author: ವಿಜಯದಾಸCategory: ಶ್ರೀಗುರು
ಮುನಿಜನರ ನೆನೆಸಿ ಜನರೂ | ಮುನಿ ಜನರ ನೆನೆಸಿ ಬಿಡ | ದನುದಿನದಲಿ ನಿಮ್ಮ | ಮನ ಮಲಿನ ಪೋಗಿ ಸ | ಜ್ಜನ ಸಂಗವಾಗುವುದು || ಅನುಮಾನವಿಲ್ಲ ಗುಣಗಣ | ವನಧಿ ಹರಿವೊಲಿದು | ಘನವಾಗಿ ಪಾಲಿಸುವನು ಮಿತ್ರಮಿತ್ರಾಯು ವಿ | ಚಿತ್ರ ಭಾರ್ಗವ ವಿಶ್ವ | ಮಿತ್ರ ಮೈತ್ರಾವಾರುಣಿ ಭೃಗು | ವೀತಿ ಹೋತ್ರ ಕಪಿ ಗಾಗ್ರ್ಯ ಗಾಲವ | ಗರ್ಗಗಾರ್ಚಮಾ || ಅತ್ರಿ ಅತಿ ಅಷ್ಟ ವಕ್ರ | ಪತ್ರ ಫಾಲಾಶವಟು | ಶಾಂಡಿಲ್ಯ ಶಕಟ ಸು | ನೇತ್ರ ಸುಮಾಂಗಲ್ಯ ಸಂ | ಕೃತಿ ಭಾರದ್ವಾಜ | ಗೋತ್ರ ಗೌರೀವೀತಹವ್ಯ | ಕಪಿ ಶಂಖಕಟ ಮೈತ್ರಾವರುಣವಾಧುಳಾ ||1|| ಉಪಮನ್ಯು ಶಂಕು ಉದ್ದಾಲಕ ಕೌಂಡಿಣ್ಯ | ಅಪುನವಾನ ಅತಿಥಿ ಪಾಂತುಚಾವನ ಚವನ | ಉಪಮಿಥ್ಯು ಕಪಿಲ ಕಾಶ್ಯಪ ಕಾಣ್ವ ಹರಿತ ಕ | ಶ್ಯಪ ಪೂತಿಮಾಷರೈಭ || ವಿಪುಳ ಜಮದಗ್ನಿ ವಾಲ್ಮಿಕಿ ರೇಭ ಜಾಬಾಲಿ | ಸ್ವಪನ ಸಾತ್ಯಕಿಯು ಸಾಮ್ಯಾಳ ದೇವರತತಿ | ತಪ ದೈವಲ ಸಿತ ಗೌತುಮ ಭದ್ರಸ್ವಾತಂತ್ರ | ಕಪಿಕುತ್ಸ್ನ ಪೌರಕುತ್ಸಾ ||2|| ಮುನಿಮಾದ್ರಮ ಶಣಶರ್ಮ ಬಾದರಾಯಣ | ಕನಕ ಕಾತ್ಯಾಯನ ಮಾರ್ಕಾಂಡ್ಯ ಮಾಂಡವ್ಯ | ಶುನಕ ಶೌನಕ ರೋಮಹರ್ಷಿಣಿ ಸೌಭರಿ | ತೃಣಬಿಂದು ಭಾಷ್ಕಾಳಾಖ್ಯ || ಪನಸ ಅಘಮರ್ಷಣ ಪ್ರಮಧ ಪ್ರಾಗಾಧ ಜೀ | ವನಯಾಜ್ಞವಲ್ಕ್ಯ ಜಿವಂತಿ ಮಾತಂಗ ಶೋ | ಭನ ಸಕೆಕೃತಿ ಭಾರ್ಗವ ಸುರವತ್ಸ ಚಂ | ದನ ಧೌಮ್ಯ ಆರ್ಯ ರುಚಿರಾ || 3|| ವಾಸಿಷ್ಟ ಶ್ರೀವತ್ಸ ಲೋಹಿತಾಷ್ಯಕಶರ್ವ | ವಾಸುಳೆ ಋಷಿ ಶಣಕ ಕರ್ದಮ ಮರೀಚಿ ಪಾ | ರಾಶರಪ್ಸಲ್ಲಾದ್ರಿಧರ ಶಕ್ತಿ ವೈರೋಹಿತ್ಯ | ಬೇಷಿ ಜಾವಾಯುಲಿಕೆಯೂ || ಭೂಷಣೌ ಬಾರ್ಹಸ್ಪತ್ಯದಾಲ್ಭ್ಯ ಸುಯಜ್ಞಾಜ್ಞಿ | ವೇಶ್ಯ ಮುಖ ಸಪರಿಧಿಸಾಲಂಕಾಯನಾ ಧರ್ಮ | ದೈಸಿಕಾ ದೇವರಾತ ವತ್ಸರಾಜಾರ್ವನಾ | ನಾಶಯ ದೇವಶ್ರವತಾ ||4|| ಗಿವಿಷ್ಠರಾ ವಾಮವಾಮರಿತ್ಯ ಕಾಲುಗ್ರ | ಶ್ರವ ಪೂರ್ಣವಾಹಕ ಕೃತು ಅಂಗಿರಸಾಂಗಿರಾ || ಪವನ ಪ್ರಚಿನಾ ಯರಿಷ್ಟ ಶಠನಾ ಪಾ | ಲವ ಶಮನ ಋಷಿಶೃಂಗ || ಕವಿ ವೇದಶಾಲ ವಿಶಾಲ ಕೌಶಿಕ ಶುಚಿ | ಭುವನ ಉರ್ಜಯನ ಮಾಹಋಷಿಭಹುದ ಸಂ | ಭವಸ್ತಂಭ ಕಿರಾಠಿ ಕಪಿಸೇನ ಶಾಂಡಿಲ್ಯ | ಪವನದಮ ಬೀಜವಾಪಿ ||5|| ಉಲಿಖಲು ಧನಂಜಯ ವಾಲಿಖ್ಯಮಾಯ | ಕಲಿಕಿ ಸೃಂಗಿ ಮಧು ಚಂದವಿತನು ಬಹು | ಬಲ ಧ್ರೂಮ ಜಠರ ಉರ್ವಾಸ ಐಕ್ಯಾಯನ | ತಿಲುಕ ವಿಭಾಂಡ ಶರಭ || ಪುಲಸ್ತ್ಯ ದಧೀಚಿ ಕಥಾಸೂನು ಸೇವಾಸ್ಯ ಮಾ | ದ್ಗಲ ವಿಷ್ಣು ತ್ರಿಧಕುಕ್ಷಿ ಶುಕ್ಷ ಮನತಂತು | ಪುಲಹ ಹವಿಧಾನ ಉತ್ತಂಕ ಉತ್ತಮ ಕಚರ | ಬಲವೀರ್ಯ ಬಬ್ರಾಮೇನೂ||6|| ಸುತಪ ಅಪವರ್ಗ ಹಿರಣ್ಯನಾಭ ಅ | ದ್ಭುತ ಅಜಾಮೀಡ ಪರ್ವತ ಶ್ವೇತಕೇತಮಾಹ || ದೃತಿ ಶಕ್ತಿ ವೈಶಂಪಾಯನ ಪೈಹಿಲಜಯ | ಸತ್ಯವ್ರತ ಶ್ರ್ರುತಿದೃತಿ ಆಯತಾ || ಶ್ರುತಿಕೀರ್ತಿ ಸುಪ್ರಭಾವತ್ಸ ಮೃತಾಂಡ ಸೂ | ಮತಿ ಕ್ರೋಢ ಕೋಲ ಗೋಬಲ ಮಾತೃಕಾನಂದ || ದ್ಯುತಿ ತಪವಿದ್ವಾಹ ದರ್ಭಾ ಜಾನ್ಹವಶೀಲ | ಕಥನ ಸರ್ವಸ್ಥಂಬವಾ ||7|| ನೈಧ್ರುವಾ ದೀರ್ಘತಮ ಜಮದಗ್ನಿ ಕಾರುಣಿ | ಸದ್ಮುನಿಕಾಂಡಮಣಿ ಮಾಂಡವ್ಯವಾಚಸಕ | ಶುದ್ಧ ಸಂವರ್ತ ಸಂತತ ಕಾಮ ಸಂಹತಿ | ಶಿದ್ಧಿಸನಕಸ ನಂದನಾ || ವಿದ್ಯಾಂಗ ಹವ್ಯರೋಹಿತಶರ್ಮ ಸೂಕರ್ಮ | ಉದ್ಧಾಳ ಉಚಿತ್ಥ್ಯಹರಿ ಮೇಧ ಮೇಧ ಪ್ರ | ಸಿದ್ಧ ಮಯೂರ ಶುಕ ಕಪಿಲ ಕಾಪಿಲ್ಲ್ಯ ಗುಣ | ಬುದ್ಧಿ ಸಮೇಧ ಪೇರ್ಮಿ ||8|| ಪಂಚ ಪಂಚಾಸಪ್ತ ಅಪ್ಟ ಕಾಲದಲಿ ಪ್ರಾ | ಪಂಚದೊಳು ತೊಡಕದಲೆ ಬುದ್ಧಿ ಚಿತ್ತದೊಳಿಟ್ಟು | ಅಂಚಿಗಂಚಿಗೆ ಬಹು ಮುನಿಗಳೊಳ | ಗಿದ್ದವರ ಕೊಂಚ ಮುನಿಗಳ ಪೇಳಿದೆ || ವಂಚನೆಯಿಲ್ಲದೆ ಸ್ಮರಿಸಿ ಮಧ್ವಮತಪೊಂದಿ | ಸಂಚಿತಾಗಮ ಕಳೆವ ಸರ್ವಸುಖವೀವ ವಿ | ರಂಪಪಿತ ವಿಜಯವಿಠ್ಠಲರೇಯ ಇದು ರವಿ | ಮಿಂಚಿನಂದದಿ ಪೊಳೆವನು ||9||

Thoughts & Reflections

0

No reflections shared yet. Be the first to share your thoughts!

Share your thought