Bhasaka
← Back to home

ಯಚ್ಚತ್ತು ನಡಿ ಕಂಡ್ಯ ಮನವೇ

Author: ವಿಜಯದಾಸCategory: ಶ್ರೀಕೃಷ್ಣ
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಆಡದಿರಪವಾದಗಳನು ನೀನು ಕೊಂಡಾಡದಿರು ಚಿಲ್ಲರೆ ದೈವಗಳನು ಬೇಡಾಡದಿರುಭಯ ಸೌಖ್ಯಗಳನು ನೀ ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು ||1|| ಹಾಳು ಹರಟಿಗ್ಹೋಗ ಬ್ಯಾಡ ಕಂಡ ಕೂಳುಗಳನು ತಿಂದು ವಡಲ್ಹೊರಿಯ ಬೇಡ ಕಾಲ ವೃಥಾ ಕಳಿಯ ಬ್ಯಾಡ ನಮ್ಮ | ಪ್ರಾಲಬ್ಧ ಭೋಗಕ್ಕೆ ಮನಸೋಲ ಬ್ಯಾಡ, ಶ್ರೀ ಹರಿ ದಯಮಾಡಾ ||2|| ನಾನು ಯೆಂಬುದು ಬಿಡು ಕಂಡ್ಯಾ ಎನ್ನ ಮಾನಾಭಿಮಾನದ ಹರಿಯನ್ನು ಕಂಡ್ಯಾ e್ಞÁನಿಗಳೊಡನಾಡು ಕಂಡ್ಯಾ ವಿಷಯ ಜೇನೆಂದು ಮೆದ್ದರೆ ಅದು ವಿಷ ಕಂಡ್ಯಾ ಬೀಳುವಿ ಯಮಕೊಂಡಾ ||3|| ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ ಮಣ್ಣು ಕೂಡಿರುವರೆಗೊ ಕೇಳೊ ಮೂಢಾ ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ ಪೂರ್ಣಪ್ರಜ್ಞರ ಬೊಧ ತಿಳಿದುಕೊ ಗಾಢ, ಮೈಮರೆದಿರ ಬ್ಯಾಡಾ||4|| ನರಜನ್ಮ ಬರುವೋದು ಕಷ್ಟ ಅಮ್ಮ ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ ಮರಳಿ ಬಾರದು ಉತ್ಕøಷ್ಟ ನಮ್ಮ ಮಾರುತ ಮತವನೆ ಪೊಂದುವದೆ ದುರ್ಘಟ, ಕೇಳೆಲವೋ ಮರ್ಕಟ ||5|| ಗೋವಿಪ್ರರ ಸೇವೆ ಮಾಡೋ ಸೋಹಂ ಭಾವಗಳನು ಬಿಟ್ಟು ದಾಸತ್ವ ಕೂಡೋ ಕೇವಲ ವೈರಾಗ್ಯ ಮಾಡೋ ಎಂಟು ಝಾವಗಳಲಿ ಶ್ರೀ ಹರಿಯ ಕೊಂಡಾಡೊ, ಲಜ್ಜೆಯನೀಡ್ಯಾಡೋ||6|| ಕಷ್ಟ ಪಡದೆ ಸುಖ ಬರದು ಕಂ ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು ದುಷ್ಟ ವಿಷಯದಾಶೆ ಜರಿದು ವಿಜಯ ವಿಠಲನೆನ್ನದೆ ಮುಕ್ತಿಯು ಬರದೂ, ಕೂಗೆಲವೊ ಬ್ಯಾದೆರದು ||7||

Thoughts & Reflections

0

No reflections shared yet. Be the first to share your thoughts!

Share your thought