Bhasaka
← Back to home

ಯಮುನೆ ದುರಿತ ಉಪಶಮನೆ

Author: ವಿಜಯದಾಸCategory: ಶ್ರೀನದಿ
ಯಮುನೆ ದುರಿತ ಉಪಶಮನೆ | ಅಮಮ ಮಂದಗಮನೆ || ಅಗಣಿತ ಸುಮನೆ ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ | ಕಾಮಿತ ಸುಫಲದಾಯೆ ಕಾಲನಿಭ ಕಾಯೆ | ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ | ಸೋಮಕುಲಪಾವನೇ ಶರಣ ಸಂಜೀವನೆ ||1|| ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ | ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ | ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ | ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ ||2|| ವಾರಿನಿಧಿ ಪ್ರಥುಕುಗಾಮಿನಿ | ಹಾರ ಮುಖೆ ಸುಪ್ರಮುಖೆ | ವೀರಶಕ್ತಿ ವಿಜಯವಿಠ್ಠಲನ | ಕಾರುಣ್ಯಪಾತ್ರೆ ಸಂಗೀತಲೋಲೆ ||3||

Thoughts & Reflections

0

No reflections shared yet. Be the first to share your thoughts!

Share your thought