Bhasaka
← Back to home

ಯಲ್ಲರಮ್ಮನಲ್ಲವೆ ಸಿರಿದೇವಿ

Author: ವಿಜಯದಾಸCategory: ಶ್ರೀಮಹಾಲಕ್ಷ್ಮಿ
ಯಲ್ಲರಮ್ಮನಲ್ಲವೆ ಸಿರಿದೇವಿ ಎಲ್ಲರಮ್ಮನಲ್ಲವೆ ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ಆಲದೆಲೆಯ ಮೇಲೆ ತನ್ನ ಪುರುಷನಂದು | ಕಾಲವರಿತು ಪವಡಿಸಿರಲು || ವಾಲಗವನು ಮಾಡಿ ಕೊಂಡಾಡಿ ಜೀವರ | ಮೂಲ ಕರ್ಮಂಗಳು ತೀರುವಂತೆ ಮಾಡಿದ ||1|| ಆಮೋಘ ವೀರ್ಯ ಗರ್ಭದಿ ಧರಿಸಿ ತಾ | ಬೊಮ್ಮಾಂಡವನೆ ಪೆತ್ತ ಲೋಕಾಮಾತಾ || ಸುಮನಸರಿಗೆ ಕಡೆಗಣ್ಣ ನೋಟದಿ | ಆ ಮಹಾ ಪದವಿಯ ಕೊಡುವ ಭಾಗ್ಯವಂತೆ ||2|| ಎರಡೊಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀ ವರ ಯೋಗ್ಯತೆಯಂತೆ ಪಾಲಿಸುತಿಪ್ಪಳು || ಪರಮ ಪುರುಷ ನಮ್ಮ ವಿಜಯವಿಠ್ಠಲನ್ನ ಕರುಣದಿಂದಲಿ ಅನಂತ ಕಲ್ಪಕೆ ನಿತ್ಯ ||3||

Thoughts & Reflections

0

No reflections shared yet. Be the first to share your thoughts!

Share your thought