Bhasaka
← Back to home

ಯೇನೆಲವೊ ದೈವಾ ವೈಕುಂಠನಾಥ

Author: ವಿಜಯದಾಸCategory: ಶ್ರೀಕೃಷ್ಣ
ಯೇನೆಲವೊ ದೈವಾ ವೈಕುಂಠನಾಥ ನೀ ನಾರಿವೇಷವನು ಧರಿಸಿದ ಬಗೆಯೇನೊ ದೈತ್ಯರು ಎರಗಿ ದೇವತತಿಗಳು ತಲ್ಲಣಿಸೆ | ಮಿತ್ರಭಾವದಲಿವರು ಕೂಡಲಿಟ್ಟು | ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು | ಮಿತ್ರವೇಷವ ಧರಿಸಿ ಸುರರ ಸಲಹಿದ ಬಗೆಯ ||1|| ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ | ಕರವ ನೀಡುವೆನೆಂದು ಬರಲಾಗಲು || ಅವನೀಶ ಭವಹರ ಕೇಶವ ನೀನೆ ಗತಿಯೆನಲು | ಯುವತಿ ವೇಷವ ಧರಿಸಿ ಶಿವನ ಸಲಹಿದ ಬಗೆಯಾ ||2|| ಅಂದು ಮಾಡಿದ ಚರಿತೆ ಭಕ್ತಜನರು ಬಂದು | ಒಂದೊಂದನ ನುಡಿದರನ ಲೀಲೆಂದು | ಇಂದು ಸತಿವೇಷವನು ಧರಿಸಿ ತೋರಿದಿಯೋ ಪು ರಂದರ ದಾಸರಿಗೊಲಿದೆ ವಿಜಯವಿಠಲ ಚಲುವಾ||3||

Thoughts & Reflections

0

No reflections shared yet. Be the first to share your thoughts!

Share your thought