Bhasaka
← Back to home

ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ

Author: ವಿಜಯದಾಸCategory: ಶ್ರೀಕೃಷ್ಣ
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಮಂಗಳ ಮೂರುತಿ ಮನುಕುಲೋತ್ತುಂಗ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಆತುಮ ಮೂರುತಿ ದಶರಥನಿಗೆ ಮಗನಾದ- ಲೀಲಾ ವಿನೋದ ಜ್ಯೋತಿ ಪ್ರಕಾಶನು ಸಾಕೇತಪುರದಲಿ ನಲಿದ- ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ ||1|| ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಜಲಜಾಯತದಳ ಪೊಕ್ಕಳಿಂದಲಿ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಪೊಳೆದ ಪ್ರಣವ ವಿಮಾನದೊಳಗಿಂದ ಬಂದ ಪರಮಾ-ನಂದ ಹೋ ಹೋ ||2|| ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ ನಿರುತದಿ ದಾಲ್ಬ್ಯ ಮುನೀಶನಿಂದ ಪೂಜೆಗೊಂಬ ಸರ್ವರ-ಬಿಂಬ ಹೋ ಹೋ ||3|| ಲೋಕ ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ ಏಕ ತನ್ನೊಳು ತಾನೆ ಪೂಜೆಯ ಮಾಡಿಸಿಕೊಂಡ -ಬಲು ಪ್ರಚಂಡ ನಾಕದ ಜನರೆಲ್ಲ ಜಯ ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ ಕೈಕಸೆಸುತ ಭಜಿಸಲು ವಲಿದು ಬಂದನಂದು, ಕರುಣಾ-ಸಿಂಧು ಹೋ ಹೋ ||4|| ದಕ್ಷಿಣ ಮುಖನಾಗಿ ಉರಗನ ಮೇಲ್ ಮಲಗಿಪ್ಪ - ಮೂಜಗದ್ದಪ್ಪ ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ ಅಕ್ಷಯ ಮೂರುತಿ ಅಪ್ರಾಕೃತ ಶರೀರ-ಧೃತ ಮಂದಾರ ಪಕ್ಷಿ ವಾಹನ ನಮ್ಮ ವಿಜಯವಿಠ್ಠಲ ರಾಜ - ರಾಜಾಧಿರಾಜ ಹೋ ಹೋ ||5||

Thoughts & Reflections

0

No reflections shared yet. Be the first to share your thoughts!

Share your thought