Bhasaka
← Back to home

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ

Author: ವಿಜಯದಾಸCategory: ಶ್ರೀನರಸಿಂಹ
ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ | ಮಂಗಳಮೂರುತಿ ಡಿಂಗರಿಗರ ಹೃಸ್ಸಂಗ ಕರುಣಾತರಂಗಾ ತನುಜನ ಜನಕನು ಕೊಲ್ಲಲು ಮೊರೆಯಿಡಾ ಬಂದ | ಕಂಭದೊಳಿಂದ | ಮನುಜಕೇಸರಿ ರೂಪಧರಿಸಿದ ನಿಜ ಲೋಕಸ್ವಾಮಿ | ಅಂತರ್ಯಾಮಿ || ದನುಜನ ಉದರ ಬಗೆದು ಕರುಳಮಾಲೆ ಇಟ್ಟಾ | ಕೊರಳೊಳು ದಿಟ್ಟಾ | ವನಜ ಭವಾದ್ಯರು ಜಯ ಜಯವೆನುತಿರೆ ಮೆರೆದಾ | ಪ್ರಹ್ಲಾದವರದಾ ||1|| ಮನದಲಿ ಬೇಡಿದ ಭಾಗ್ಯವ ಕೊಡುವನು ಚಲುವಾ | ಭಕುತರಿಗೊಲಿವ | ಅನುದಿನದಲಿ ಅನುಕಂಪನು ಹರಿ ನಮಗೆಲ್ಲಾ | ಭಕ್ತವತ್ಸಲಾ || ಘನಮಹಿಮನು ಪರಿಪೂರ್ಣ ಗುಣಾಂಬುಧಿ ತೇಜ | ರಾಜಾಧಿ ರಾಜ | ಜನುಮ ಜನುಮದಲಿ ಜನನಾದಿಗಳಿಗೀತ ಮುಖ್ಯ | ಕರ್ತನು ಸಖ್ಯ ||2|| ಕನಕಮುನೀಶ್ವರ ತಪವನು ಮಾಡಲು ಮೆಚ್ಚಿ | ಬಂದನು ಮೆಚ್ಚಿ | ಕನಕ ವರುಷವನು ಗರೆವದು ಅಂದಿನ ದಿನದಿ | ಆನಂದವನಧಿ | ಕನಕ ನೃಕೇಸರಿ ಎನಿಸಿದಾ ಅಂದಿನಾರಭ್ಯಾ | ಈತನೆ ಸಭ್ಯಾ | ಅಳನಯನ ರೂಪ ಲಿಂಗಾಕೃತಿಯಾ ಪೊಳೆವಾ | ನುತಿಸಲು ಸುಳಿವಾ ||3|| ಗುಣದಲಿ ತಿಳಿವದು ರುದ್ರಗೆ ಹರಿರೂಪವಿಲ್ಲಾ | ಇದು ಪುಸಿಯಲ್ಲಾ | ವನಜನಾಭಗೆ ನಾನಾ ರೂಪಗಳುಂಟೆಂದು ವೇದಾ | ಪೇಳ್ವದು ಮೋದಾ || ಪ್ರಣತನಾಗದ ಇನಿತಾಗದ ಪಾಪಿಷ್ಠ ಮನುಜಾ | ಅವನೇ ದನುಜಾ | ಗಣನೆಮಾಡದಲಿರಿ ಇವರನು ಸುಜನರು ಇಂದೆ | ನಮಗೀತ ತಂದೆ ||4|| ಇವನಂತೆ ಒಪ್ಪುವಾ ಪೊಂಪಾ ನಿಧಿಯೊಳು ಧನದಾ | ದಿಕ್ಕಿಲಗಾಧಾ | ಮುನಿಜನ ಸಮ್ಮತ ಶ್ರುತಿ ಉಕ್ತಿಗಳಲ್ಲಿ ಅಕ್ಕು | ಕೇಳೀವಾಕು | ಮಣಿದು ನಮಿಸಿ ಒಮ್ಮೆ ಧ್ಯಾನವ ಮಾಡಲು ಭಕುತಿ | ಉಂಟು ವಿರಕುತಿ | ಹನುಮದೀಶ್ವರ ನಮ್ಮ ವಿಜಯ ವಿಠ್ಠಲ ನರಸಿಂಗಾ | ರಿಪುಗಜ ಸಿಂಗಾ ||5||

Thoughts & Reflections

0

No reflections shared yet. Be the first to share your thoughts!

Share your thought