Bhasaka
← Back to home

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ

Author: ವಿಜಯದಾಸCategory: ಶ್ರೀಕೃಷ್ಣ
ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ | ರಂಗನಾಡಿದ ಪೊಂಗೊಳವಿಯಲಿ ಶೃಂಗಾರದಿಂದ ಗೋಪಾಂಗನೆಯ ಕೂಡ | ತುಂಗ ವಿಲಾಸ ತಾ ರಂಗ ಕೇಳಿಯಲಿ | ಸಂಗೀತ ಪಾಡುತ ಸಾಂಗೋಪಾಂಗದಿಂದಾ ಹೊಳಿಯ ಜನಕೋಕುಳಿಯ ಕಲಿಸಿ | ಗೆಳೆಯರೊಂದಾಗೆ ಕಳೆಯೆವೇರುತ್ತ | ಅಳಿಯ ಗರುಳಬಲಿಯರರಸಿ | ಇಳಿಯಾಳಗೋಕುಳಿ ವಸಂತವಾ | ಉಳಿಯದಂತೆ ವೆಗ್ಗಳಿಯ ತರಿಸಿ ಹಳೆಯ ಬೊಮ್ಮನ ಬಳಿಯವಿಡಿದು | ಸುಳಿಯಲೊವಸನೆ ರುಳಿಯ ಕೈಸರ | ಪಳಿಯ ಚಲುವ ತಿಳಿಯಗೊಡದೆ ||1|| ಸಕ್ಕರೆದುಟಿ ಹೆಮ್ಮಕ್ಕಳು ಯೆಲ್ಲರು | ನಕ್ಕು ಕೈಯ ಹೊಯಿದ | ಕ್ಕರದಿಂದ ತಾ | ವರ್ಕರಾಗಿ ನಿಂದೂ ತೆಕ್ರ್ಕೊರಂಗಯೆಂದು | ಜಿರ್ಕೊಳವಿಲಿಂದಲಿಕ್ಕಿದರು | ಸೊಕ್ಕಿದಾ ನೆಡಸಿ ಹೊಕ್ಕು ಎರಗಿದಂ | ತೊಕ್ಕಟರಾಗಿ ದೇವಕ್ಕಿ ತನುಜನ ಸಿಕ್ಕಿಸಿಕೊಂಡರು | ಅಕ್ಕಟಾಬ್ಜಗಬ್ಧಿ ಉಕ್ಕಿದಂತೆ ಮನ | ಉಕ್ಕುತಲಿ ||2|| ನಾರಿಯರಿಂದ ಉತ್ತರವ ಲಾಲಿಸಿ | ಮಾರನಯ್ಯನು ಕೆನ್ನೀರನು ತುಂಬಿ ಅ | ಪಾರನಾರಿ ಪರಿವಾರದವರ ಶರೀರವ ಮೇಲೆ | ವಿ | ಸ್ತಾರವಾಗಿ ಕಾರಿ ವಾರಿದನು ನೀರೆರದಂತಾಗೆ | ಆರೊಂದು ಬುದ್ಧಿಗೆ ಮೀರಿತಿದೊ ಎಂದು | ವಾರುಣಿಪತಿ ಪಂಕೇರುಹಾಭವ ಕಂ || ದರವ ಬಾಗಿಸಿ ಸಾರಿದರು ||3|| ಖಗ ಮೃಗ ಧ್ವನಿದೆಗೆದು ಪಾಡಲು | ನಗ ಬೆವರಿ ಪನ್ನಂಗ ನೋಡಾಗಲು | ಅಗಣಿತ ಮುನಿ ಚಿಗಿದು ಪಾಡಲು | ನಗ ಬೆವರಿ ಪನ್ನಂಗ ನೋಡಾಗಲು | ಅಗಣಿತ ಮುನಿ ಚಿಗಿದು ಪಾಡಲು ಪೊಗಳ ಬಗೆಯಿಂದ | ಗಗನ ಮಣಿ ತಾರೆಗಳು ಚಂದ್ರ ನಗುತ ತಮ್ಮ ಪಥಗಳು ನಿಲಿಸಿ | ಮಂಗಳಕರವ ಮುಗಿದು ಸೋಜಿಗ ಜಗದೊಳಗಿದು ಮಿಗಿಲೆನುತಲಿ ||4|| ದುಂದುಭಿ ಮೊರಿಯೆ ಧಂ ಧಂ ಧಳಾ ಎಂದು | ವೃಂದಾರಕ ವೃಂದ ಚಂದದಿ ಪೂಮಳೆಯಂದುಗರಿಯಲು | ಚಂದಣಗಂದಿಯ ಒಂದಾಗಿ ನಿಂದರು ವಂದಿಸುತ | ಮಂದಹಾಸನಖ ದುಂದುಭಿ ಓಕಳಿಂದಲೆರಾರೈಪಾ ಸಿಂಧು ಮೆರೆದ ನಾರಂದವರದ ವಿಜಯವಿಠ್ಠಲ | ಪುರಂದರದಾಸರ ಮುಂದಾಡಿz ||5||

Thoughts & Reflections

0

No reflections shared yet. Be the first to share your thoughts!

Share your thought