Bhasaka
← Back to home

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ

Author: ವಿಜಯದಾಸCategory: ಶ್ರೀಹನುಮಂತ
ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ | ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು | ಸತತ ಚಂಚಲ ದೂರ ಸ್ಥಿತಿಗೆ ಎರಗಿದೆ ಸು | ಕೃತವೆಲ್ಲ ಪೋಗಾಡಿದೆ ಇದಕೆ ಪ್ರಾಯಶ್ಚಿತ್ತ ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ | ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ | ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ||1|| ನಾನಾ ಮಹಿಮ ಮಾನ ಪಾವನ ವಿದ್ಯಾ ಪ್ರ | ವೀಣಾರೋಚನಾ ವಿe್ಞÁನಾಭಿಮಾನಿ ನಿ | ದಾನ ತ್ರಿಜಗದ್ಗುರುವೆ ಸುರತರುವೇ | ನಾನೆ ನಿನಗೆ ಕರವ ಮುಗಿದು ಕರವೇ | ಧ್ಯಾನದಿಂದಲಿ ಬೆರವೆ ಸುತ್ಯನ್ಯರವೇ | ಜನನವ ಬಿಡಿಸೋದು ಗಾನವ ನುಡಿಸೋದು ||2|| ವ್ಯಾಸಮುನಿ ವರದಾ ವಸುಧಿಯೊಳಗೆ ಮೆರೆದಾ | ಭಾಷಿಸುವ ಮಾತಂಗ ಪರ್ವತದಲಿ ತುಂಗಾ | ವಾಸಾ ವಾಸವ ವಿನುತ ಸತ್ವಕಾಯಾ | ಶಾಶ್ವತಾಗಮ ವಿಖ್ಯಾತಾ ನಿತ್ಯ ಜಪಿತಾ | ಲೇಸು ಸುದರುಶನ ತೀರ್ಥ ತೀರದಲ್ಲಿಪ್ಪಾ | ಶ್ರೀಶ ವಿಜಯವಿಠ್ಠಲನ ದಾಸನ ಮಾಡಿ ಮುನ್ನಾ ||3||

Thoughts & Reflections

0

No reflections shared yet. Be the first to share your thoughts!

Share your thought