Bhasaka
← Back to home

ರಥವನೇರಿದ ರಥಗಾತ್ರ ಪಾಣಿ

Author: ವಿಜಯದಾಸCategory: ಶ್ರೀಕೃಷ್ಣ
ರಥವನೇರಿದ ರಥಗಾತ್ರ ಪಾಣಿ | ರಥಪತಿ ದಶರಥ ಸುತ ದಶರಥ ನೃಪ ಭಾಗೀ | ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಸುರಪಥ ಪಿತಾ ಕರಿ ಭಯಂಕ ಹರ ಹರಿಣಾಂಕಾ | ಕಿರಣಶತ ಧಿಕ್ಕರಿಸುವ ದೇವಾ || ವರಮಣಿ ಭಕ್ತ ವರದಾಯುದಧಿ ತುರಗವು | ಪರತರ ತಮ ತರರಸ | ಪರಮ ಮಂಗಳ ಪುರುಷ ಪ್ರಧಾನಂ | ತರ ಪ್ರವಿಷ್ಠ ಭಾ | ಸುರ ಕೀರ್ತಿಹರ ನಿರುತ ಪ್ರದರು ಸುರಪತಿ ||1|| ಮಣಿಪ್ರಚುರ ಮುತ್ತಿನ ಮುಕುಟ ಸು | ಫಣಿ ಕಸ್ತೂರಿ ಕಂಕಣ ಕೇಯೂರ ಕಾಂ| ಚನ ಸರಿಗೆಯು ಘನ ಶ್ರೀ ವತ್ಸಲಾಂಛನ ಕೌಸ್ತುಭ ಸೂರ್ಯನಗೆಲ್ಲ್ಲೆ | ವನಮಾಲೆ ಹರಿಮಣಿ ಪದಕ ಪಾ | ವನ ಪೀತಾಂಬರ ಮಿನಗುವ ಕಾಂಚಿ | ಝಣ ಝಣ ಮಹಾ | ಧ್ವನಿ ಚರಣ ಭೂಷಣವಾಗಿಯೂ ಮಾ | ನಿನಿ ಕೂಡಾ ||2|| ಎತ್ತಿದ ಶ್ವೇತಾತಪತ್ರ ಚಾಮೀಕರ | ಸತ್ತಿಗೆ ಪತಾಕಿ ವಿತ್ತ ನೋಡಿದರಾಗತ್ತಾ ನಭ ತುಳುಕುತ್ತಲಿರೆ ಧ್ವಜ | ಮಾತ್ರ ಬಂದಾಗಿ ತೂಗುತ್ತಿರಲು | ಸುತ್ತಲು ಊದುವ ತುತ್ತುರಿ ಶಂಖ | ವತ್ತಿ ಬಾರಿಸುವ ಮತ್ತೆ ವಾದ್ಯಗಳು | ತುತ್ತಿಸುವ ಮುನಿ | ಉತ್ತಮ ಜನ ಬಾ | ಗುತ್ತ ವಡನೆ ಬರುತಿರಲು ||3|| ವಸು ರುದ್ರಾದಿತ್ಯ ವಸುಜನರ ಪಾ | ಲಿಸುವೆನೆಂದು ದರಶನವು ಸರಸಿಜಗದಾಧರಿಸಿಕೊಂಡು ಅಷ್ಟ ರಸ ನಾಮಕ ಹರುಷದಿಂದ | ನಸುನಗುತ ನೀಕ್ಷಿಸಿಕೊಳುಂತ ಆ | ಲಸ ಮಾಡದೆ ರಂ | ಜಿಸುವ ಲೀಲಾಮಾನಸ ವಿಗ್ರಹ ಮೆ | ಚ್ಚಿಸಿದ ಜನರ | ವಶವಾಗಿಪ್ಪ ರಾಕ್ಷಸ ರಿಪು ||4|| ದಯ ವನಧಿ ಚಿನ್ಮಯ ಉ | ಭಯಾ ಭಯ ಹಾರೆ | ಪಯೋವಾರಿ ನಿಧಿ | ಶಯನ ಚತುರ್ಬೀದಿಯಲಿ ತಿರುಗಿ | ಪ್ರೀಯದಿಂದಲಿ ಸ | ತ್ಕ್ರಿಯವಂತ ಜಯ ಜಯ ಪ್ರದಾ | ಜಯಾ ರಮಣ ವಿಜಯ ಸಾರಥಿ ನಿ | ರಯ ವಿದೂರ ವಿಜಯವಿಠ್ಠಲ ಸಾ | ಹಾಯವಾಗುವ ಗಿರಿಯ ವೆಂಕಟರಾಯ ಬಂದಾ ||5||

Thoughts & Reflections

0

No reflections shared yet. Be the first to share your thoughts!

Share your thought