Bhasaka
← Back to home

ರುದ್ರಾ ವೀರಭದ್ರ ಅದ್ರಿನಂದನೆ ರಮಣಾ

Author: ವಿಜಯದಾಸCategory: ಶ್ರೀಶಿವ
ರುದ್ರಾ ವೀರಭದ್ರ ಅದ್ರಿನಂದನೆ ರಮಣಾ ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿ ಸರ್ಪಭೂಷಣ ಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ವ್ಯೋಮಕೇಶ ಒಪ್ಪಿಕೊಳ್ಳಬೇಕು ಒಲಿದು ಈ ವಾಕು ||1|| ಸದ್ಯೋಜಾತ ಭೂತನಾಥ ಭಕುತರದಾತ ಖದ್ಯೋತ ಲಾವಣ್ಯ ಸುರಜ್ಯೇಷ್ಠನ ಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದ ಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ||2|| ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ ಜನಿಸಿ ಕಾಡುವ ರೋಗ ಕಳೆಯೊ ಬೇಗ ಅನುಪಮ ವಿಜಯವಿಠ್ಠಲನ ನಾಮಾಮೃತವ ಎನಗುಣಿಸುವುದೋ ಸಾಂಬು ಮರುತ ಪ್ರತಿಬಿಂಬ ||3||

Thoughts & Reflections

0

No reflections shared yet. Be the first to share your thoughts!

Share your thought