← Back to home
ಪರಮ ಸತ್ಯನೆ ಪುರುಷ ಗುಣಮಣಿ
Author: ಸ್ವಾಮಿ ಶಾಸ್ತ್ರಾನಂದCategory: ಶ್ರೀರಾಮಕೃಷ್ಣRaaga: ಬೇಹಾಗ್Taala: ತೇವರಾ
ॐ
ಪರಮ ಸತ್ಯನೆ ಪುರುಷ ಗುಣಮಣಿ
ಕಲಿಯ ಕಳೆಯುವ ಚರಣ ನಿನ್ನಯ
ನಿರುತ ಭಜಿಸದ ಕೃಪಣ ಎನಗೂ
ದೀನಬಂಧುವೆ ನೀನೆ ಶರಣು ||
ಭಕುತಿ ಭಜನೆ ತಪಗಳಿಂದಲೆ
ಮುಕುತಿ ಗಳಿಸುವ ಎಂದು ಅರಿತಿಹೆ |
ಯುಕುತಿ ನುಡಿದರು ನಂಬಿ ನಡೆಯದ
ಶಕುತಿಹೀನಗೆ ನೀನೆ ಶರಣು ||
ರಾಮಕೃಷ್ಣ! ನಿನ್ನ ಚರಣ
ರಾಗತೃಷ್ಣಾ-ಶಮನಕರಣ |
ಸತ್ಯಪಥನೇ ಮೃತ್ಯುಹರನೇ
ದೀನಬಂಧುವೆ ನೀನೆ ಶರಣು ||
ನಿನ್ನ ಪಾವನನಾಮ ಶುಭಕರ
ದುರಿತವಾರಕ ಸುಕೃತಿಕಾರಕ |
ಸ್ಥಾನವಿಲ್ಲದ ದೀನ ಎನಗೆ
ಮಾನವಾಶ್ರಯ ನೀನೆ ಶರಣು ||
(ʼಶ್ರೀರಾಮಕೃಷ್ಣ ಸ್ತೋತ್ರ'ದ ಭಾವಾನುವಾದ)
Thoughts & Reflections
0No reflections shared yet. Be the first to share your thoughts!