Bhasaka
← Back to home

ಲಿಂಗಾಭವ ಭಸಿತಾಂಗ ಅಂಗಜಮದ ಭಂಗ

Author: ವಿಜಯದಾಸCategory: ಶ್ರೀಶಿವ
ಲಿಂಗಾಭವ ಭಸಿತಾಂಗ ಅಂಗಜಮದ ಭಂಗ ಶೃಂಗಾರ ಗುಣನಿಧಿ ಕೃಪಾಂಗ ಎನ್ನನು ಕಾಯೊ ರಜತಪರ್ವತವಾಸ ಸುಜನ ಮನವಿಲಾಸ ಅಜನಂದನ ರುದ್ರ ವೀರಭದ್ರಾ ಕುಜನಮತವನು ಬಿಡಿಸೊ ನಿಜಪಥವ ತೋರಿ ಭುಜಗಭೂಷಣ ಸಾಂಬ ಪ್ರಾಣ ಪ್ರತಿಬಿಂಬ ||1|| ನೀಲಕಂಧರ ವಿಶಾಲಗುಣ ಸುಂದರ ಫಾಲಲೋಚನ ಭಜಕ ಕಾಲಹರ ಪಾರ್ವತಿ ಲೋಲ ಭಕ್ತರ ಪಾಲ ಪಾಲಯ ಶ್ರೀ ಸಿರಿ ಲೊಲನಪ್ರಿಯ ||2|| ದುರ್ವಾಸ ಶುಕಮುನಿಯೆ ಉರ್ವಿಯಾಳ್ ನಿನಗೆಣೆಯೆ ಓರ್ವ ಮೂಕನ ಕೊಂದು ಮರಳೆ ಬಂದು ದೇವ ದೇವ ನಮ್ಮ ವಿಜಯವಿಠ್ಠಲರೇಯ ಸರ್ವೋತ್ತಮನೆಂಬ ನಾಮರಸ ಉಂಟಾ ||3||

Thoughts & Reflections

0

No reflections shared yet. Be the first to share your thoughts!

Share your thought