ॐ
ವಂದಿಪ ಬನ್ನಿ ನೀವೆಲ್ಲ ಚನ್ನಾಗಿ ಕುಂತಿ
ಕಂದ ಭೀಮಗೆ ಸರಿಯಿಲ್ಲ
ಎಂದೆಂದಿಗೆ ಬಿಡದೆ ಬಂದಾ ಪ್ರತಿಬಂಧಕಗಳ
ನಿಂದಿರಗೊಳದಲೆ ಕಳಿವ ನಿತ್ಯ ಸುಳಿವಾ
ಅರಿತುಳಿವಾ ಸತ್ಕೀರ್ತಿ ಪೊಳವ
ಪ್ರಳಯಾಂತದಲ್ಲಿ ತಾನು ತಿಳಿದು ಸತ್ವ ಜೀವರ ನೆಲೆ
ಗೊಳಿಸುವೆನೆಂದು ಬಲುಹರುಷದಲಿ
ಜಲಜನಾಭನ ಚರಣಾಬ್ಜಕರಿಗೆ ಹಸ್ತ ಮುಗಿದು
ತಲೆಬಾಗಿ ಬಿನ್ನೈಸಿದಾತಾ ಗುಣಜಾತಾ
ಶ್ರುತಿವಿನುತ ಇದೇ ಕಾಯವನಿತ್ತ ||1||
ಅಂಡಾಂತದೊಳು ತನ್ನ ಮಂಡೆ ಮೇಲೆ ಭಾರವ
ಕೊಂಡಾ ಸಹಸ್ರ ಫಣ ಕುಂಡಲಿಯ ಪೊತ್ತಾ
ಗಂಡುಗಲಿ ಕೂರ್ಮನಾ ಕೊಂಡಾಡಲು ನಮಗೆ
ತಂಡತಂಡದ ಮಹಾ ಸೌಖ್ಯವನೀವ ಸಖ್ಯಾ
ಸಗುಣಾಖ್ಯಾ ಗುರುವೀತನೇ ಮುಖ್ಯಾ ||2||
ಭೀಮನೆ ಭೀಮಸೇನಾ ಭೀಮರಾಯನೆಂದು ನೇಮದಿಂದಲಿ
ನಾಮವ ನೆನೆದಡೆ ಪಾಮರ ಬುಧ್ಧಿಯನ್ನು
ತಾಮಸರ ಕರ್ಮಸ್ತೋಮ ಓಡಿಸಿ ನಿತ್ಯ ಸತ್ಪುಣ್ಯ
ಅನುಗಣ್ಯ ಬಲು ಗುಣ್ಯಮಾಡಿಸುವನನ್ಯ ||3||
ಹಿಂದೆ ರಘುನಾಥನ ಛಂದದ ದೂತನಾಗಿ
ಸಿಂಧು ಬಂಧಿಸಿ ಶತಕಂಧರನ ಕೊಲ್ಲಿಸಿ ಇಂದು ವಂಶದಲಿಂದು
ಮಂದಹಾಸದಲುದಿಸಿ ನಂದದಿಂದಲಿ ಕುರುಬಲವ
ಗೆದ್ದ ಚಲುವ ಭಕ್ತಗೊಲಿವ ಮೂಲೋಕವ ಗೆಲುವ ||4||
e್ಞÁನ ಭಕ್ತಿ ವೈರಾಗ್ಯ ನಾನಾ ಪ್ರಕಾರ ಭೀಷ್ಟೆ
ಮಾಣದೆ ಕೊಡುವನು ಅನಂತ ಕಾಲಕೂ ಆನಂದತೀರ್ಥನೀತಾ
ಪ್ರಾಣಾದಿ ಪಂಚರೂಪ ಶ್ರೀನಾಥ ವಿಜಯ ವಿಠ್ಠಲಾ
ಸಿರಿನಲ್ಲಾ ಪೊರೆವೆಲ್ಲಾ ಒಂದೆಂಬದಲ್ಲಾ ||5||
Thoughts & Reflections
0No reflections shared yet. Be the first to share your thoughts!