Bhasaka
← Back to home

ವಂದಿಸು ವಂದಿಸು ಗುಣವ

Author: ವಿಜಯದಾಸCategory: ಶ್ರೀಕೃಷ್ಣ
ವಂದಿಸು ವಂದಿಸು ಗುಣವ ಕೊಂಡಾಡಿ ಅರ ವಿಂದನಾಭನ ಮೂರ್ತಿ ನೋಡಿ | ಹಾಹಾ | ಆ ನಂದ ಸಿಂಧುವಿನೊಳು ಪೊಂದು ಒಂದೆ ಭಕ್ತಿಯಿಂದ ಇಂದುವಿನಂದದಿಪ್ಪನಾ ಓಂಕಾರ ಪ್ರತಿಪಾದ್ಯನೀತಾ ಅಕಳಂಕ ಅಪ್ರಾಕೃತನೀತಾ ಬಿರು ದಾಂಕ ಅಖಂಡವ್ಯಾಪುತ ತನ್ನ ಸಂಕಲ್ಪಕ್ಕೆ ಮೀರಾಜಾತಾ | ಹಾಹಾ| ಪಂಕಜಸಖ ಕೋಟಿ ಸಂಕಾಶ ಸುರಗಣ ಲಂಕಾರವಾಗಿಪ್ಪ ವೆಂಕಟರಮಣನ್ನ ವಂದಿಸು ||1|| ಪ್ರಳಯದಲ್ಲಿ ವಟಪತ್ರದಲ್ಲಿ ಮಲಗಿಪ್ಪ ಭುವನ ಪವಿತ್ರ ನಿತ್ಯ ಬಲು ಲೀಲಾಚಿತ್ರ ವೈಚಿತ್ರ ಕರ್ಮ ನೆಲೆಗೊಳಿಸುವ ಶ್ರೀ ಕಳತ್ರ || ಹಾಹಾ || ಪೊಳೆವ ಏಳು ಕೋಟಿ ನಿಲವು ಪರಿಮಿತಾ ತಲುವರಿಯಾದ ವಿಮಲಜ್ಞಾನ ಪೂರ್ಣನ್ನ ವಂದಿಸು||2|| ನಿರ್ವಿಕಾರ ನಿರ್ಗುಣಾ ದೇವ ಓರ್ವನಹುದೊ ಕಲ್ಯಾಣಾ ಮೂರ್ತಿ ಸರ್ವರೊಳಗೆ ಬಲು ಜಾಣಾನಾಗಿ ಸರ್ವದಾ ಚರಿಪ ಪ್ರವೀಣಾ ||ಹಾಹಾ || ಊರ್ವಿ ಭಾರಕರಾದ ಪೂರ್ವ ದೇವರುಗಳ ಗರ್ವಹರನ ಒಂದು ದೂರ್ವಿಗೆ ಒಲಿವನ್ನ ವಂದಿಸು ||3|| ಕಾಲನಾಮಕ ಭಗವಂತಾ ವೇಗ ಪೇಳಿಸುವನು ಏಕಾಂತಾತತ್ತ್ವ ಕೇಳು ಮನವೆ ನಿಶ್ಚಿಂತಾದಲ್ಲಿ ಹೇಳುವೆ ಮುಂದೆ ವೃತ್ತಾಂತಾ | ಹಾಹಾ | ಶ್ರೀಲಕುಮಿಗೆ ತಾನು ವಾಲಯ ಪ್ರೇರಿಸಿ ಮೇಲುಪದಗಳಿಂದ ವಾಲಗಗೊಂಡನ್ನ ವಂದಿಸು ||4|| ಪುರುಷ ನಾಮಕ ನಾರಾಯಣಾ ತನ್ನ ಶರಣರಿಗೆ ಪಂಚಪ್ರಾಣಾನಾಗಿ ಪೊರೆವನು ಬಿಡದನುದಿನಾ ಇದೆ ಸ್ಥಿರವಾಗಿ ತಿಳಕೊಂಡು ಧ್ಯಾನಾ | ಹಾಹಾ | ತರಳ ಯವ್ವನ ವೃದ್ಧ ಪರಿಯಂತ ಮಾಡಲು ಎರಡೊಂದು ಪರಿಯಲ್ಲಿ ಮಿನಗುವ ದೇವನ್ನ ವಂದಿಸು ||5|| ಒಂದೊಂದು ಅವಯವದಿಂದ ತತ್ವ ಮಂದಿಯ ಪಡೆದ ಗೋವಿಂದ ಅವ ರಿಂದ ಸ್ತುತಿಸಿ ಕೊಂಡಾನಂದ ಬಂದು ಕುಂದದೆ ವರ್ಣಿಪ ಛಂದಾ | ಹಾಹಾ | ಎಂದಿಂಗೆಂದೀಗೆ ಗುಣವೃಂದ ಎಣಿಪರಾರು ತಂದೆ ಎಂದೆಂದಿಗೂ ಸುಖ ತಂದು ಕೊಡುವನ್ನ ವಂದಿಸು||6|| ಅನಿರುದ್ಧ ಪ್ರದ್ಯುಮ್ನ ಸಂಕರುಷಣ ವಾಸುದೇವ ನಿಃಶಂಕ ತನ್ನ ನೆನೆದವರಿಗೆ ನಿರಾತಂಕ | ಹಾಹಾ | ತನಗೆ ತಾನೆ ಬಿಜ್ಜಣನಾಗಿ ಜೀವರ ಕ್ಷಣ ಬಿಡದಲೆ ಕಾರಣನಾಗಿ ಇಪ್ಪನ್ನ ವಂದಿಸು||7|| ಕಾರ್ಯಕಾರಣ ರೂಪದಿಂದ ಸರ್ವಕಾರ್ಯ ಮಾಡಿಸುವ ಮುಕುಂದ ಸ್ವರ್ಣ ವೀರ್ಯವಿಟ್ಟನು ವೇಗದಿಂದ ಪದ್ಮ ಭಾರ್ಯಳಲ್ಲಿ ದಯದಿಂದ | ಹಾಹಾ | ಮರ್ಯಾದಿಯಲಿ ಸುರ ವೀರ್ಯಾಂಡಾ ಪುಟ್ಟಿಸಿ ಪರ್ಯಾಯದಲ್ಲಿ ತಾತ್ಪರ್ಯ ನುಡಿಸುವನ್ನ ||8|| ಮೀನ ಕಮಠ ಕಿಟಿ ಮನುಜ ಸಿಂಗ ದಾನ ಪಿಡಿದ ಭೃಗು ತನುಜ ಸೀತಾ ಪ್ರಾಣೇಶ ಬಲಭದ್ರಾನುಜ ಅಭಿಮಾನಗೇಡಿ ದುಷ್ಟದನುಜ | ಹಾಹಾ | ಶ್ರೇಣಿಯ ವ್ರತವ ಕ್ಷೀಣವಗೈಸಿನ್ನು ಜಾಣರ ಕಾಯಿದ ಅನಾಥ ಮಿತ್ರನ್ನ ವಂದಿಸು ||9|| ಕಪ್ಪು ಕೂಡಿದ ಐದು ಮೂರ್ತಿ ಮತ್ತೆ ಒಪ್ಪುವ ಚತುರ ವಿಂಶತಿ ಮುಂದೆ ಇಪ್ಪವು ಈರೈದು ಶತಿಹೆಚ್ಚೆ ತಪ್ಪದೆ ಸಾಸಿರ ಮೂರ್ತಿ | ಹಾಹಾ | ಅಪ್ಪುತ ವಿಶ್ವಾದಿ ಅಪಾರಾ ಅಜಿತಾದಿ ಗಪ್ಪ ನನ್ನಯಗಳು ಜಪ್ಪುತಜಾದಿಯ ವಂದಿಸು||10|| ಎಸೆವ ಕಪಿಲ ವೇದವ್ಯಾಸಾ ತಾಪಸ ವೃಷಭ ಮಹಿದಾಸಾ ರಂ ಜಿಸುವ ಸಾರ್ವಭೌಮ ಹಂಸಾ ದಿವ್ಯ ಪೆಸರಾದ ವೈಕುಂಠಾಧೀಶಾ | ಹಾಹಾ | ಕುಶಲ ಹಯಮೊಗ ಅಸುರರ ಮೋಹ ಕ ಲಶ ತಂದ ಧನ್ವಂತ್ರಿ ಋಷಿದತ್ತ ಕೃಷ್ಣನ್ನ||11|| ನಾರಾಯಣ ವಿಷ್ಟಕ್ಸೇನಾ ಗುಣ ಸಾರಾ ಹರಿ ರುದ್ರಪ್ರಾಣಾ ಶಿಂಶು ಮಾರವಿದ್ಭಾನು ಗೀರ್ವಾಣ ಪಟ ಸಾರಿದ ಯಜ್ಞನಿದಾನಾ | ಹಾಹಾ | ಕಾರುಣ್ಯನೇಕಾವತಾರ ಜಡ ಜೀ ವರ ಸಂಗಡ ವಿಸ್ತಾರವಾಗಿಪ್ಪನ್ನ ವಂದಿಸು ||12|| ಇಂತು ಬಲ್ಲಿದ ಸಿರಿ ಅರಸಾ ತನ್ನ ಅಂತು ತೋರನು ವಂದು ದಿವಸಾ ಎಲ್ಲ ಸಂತರಿಗೆ ನಾಮ ತರಸಾ ದುಷ್ಟ ಚಿಂತೆಯಲ್ಲಿ ಭಕ್ತರಿರಸಾ | ಹಾಹಾ | ನಿಂತು ನಿರ್ಮಳ ಸ್ವಾತಂತ್ರತನಾದಲ್ಲಿ| ತಂತು ನಡಿಸುವ ಆದ್ಯಾಂತ ಸತ್ ಚಿತ್ತನ್ನ ವಂದಿಸು ||13|| ಅಷ್ಟ ಕರ್ತೃತ್ವ ಷಡ್ಗುಣ್ಯ ಭೂತಿ ಇಷ್ಟದಲ್ಲಿಪ್ಪ ನಿರ್ಗುಣಾ ಸರ್ವಾ ಭೀಷ್ಟವ ಕೊಡುವ ಸತ್ರಾಣಾ ತನ್ನ ನಿಷ್ಠೆ ಉಳ್ಳವರಿಗೆ ಕರುಣಾ | ಹಾಹಾ | ತುಷ್ಟಾಗಿ ಇಟ್ಟ ಅನಿಷ್ಟ ಪಾಪ ಪುಣ್ಯ ನಿಷ್ಟವ ಮಾಡಿ ವಿಶಿಷ್ಠನ ಪೊರೆವನ್ನ ||14|| ಎರಡೈದಾವರಣಾ ಬೊಮ್ಮಾಂಡ ಮಾಡಿ ತರತಮ್ಯ ಗುಣ ಥಂಡ ಥಂಡಾದಿಂದ ವಿರಚಿಸಿದನು ಉದ್ದಂಡಾ ಆವಾ ತರುವಾಯ ಉಪಾಯ ಕಂಡಾ | ಹಾಹಾ | ಪರಮೇಷ್ಠಿಯ ತನ್ನ ಹಿರಿಯಮಗನ ಮಾಡಿ ಪರಿಪಾಲಿಪ ಚತುರ ಭುವನೇಶನ ವಂದಿಸು ||15|| ವಿರಾಟರೂಪವ ಧರಿಸೀ ಅದೇ ಶರೀರದಲ್ಲಿ ಸುರರ ಧರಿಸಿ ತಂದು ವಾರಿಜ ಭವದೊಳು ಹೊರಿಸೀ ಪೋಗಿ ಆರು ತಿಳಿಯದಂತೆ ಮೆರೆಸೀ | ಹಾಹಾ| ಕೀರುತಿಯನು ಸರ್ವ ಭಾರ ಕರ್ತನಾಗಿ ಕ್ರೂರರಿಗೆ ಸುಕುಠಾರವಾಗಿದ್ದನ್ನ ವಂದಿಸು ||16|| ಅವರವರೋಗ್ಯತ ನೋಡಿ ಸುಕೃತ ದುಷ್ಕರ್ಮಗಳು ನೀಡಿ ಮುಕ್ತಿ ಭವತಮನಸಿನಲ್ಲಿ ಕೂಡಿ ಚರಿ ಸುವ ಸಂಬಂಧವ ಮಾಡೀ | ಹಾಹಾ | ತ್ರಿವಿಧ ಜೀವರ ಸಾಕುವ ವೈಷಮ್ಯವಿಲ್ಲ ದವನಾಗಿ ಸಾಮರ್ಥನವ ನವ ಮಾಯನ್ನ ವಂದಿಸು||17|| ನಿತ್ಯಾನಿತ್ಯ ಪದಾರ್ಥದಲ್ಲಿ ವ್ಯಾಪ್ತ ಸತ್ಯ ಸಂಕಲ್ಪ ವೇದದಲ್ಲಿ ಕೇಳು ಅತ್ಯಂತ ಮಹಿಮಾ ಎಲ್ಲೆಲ್ಲಿ ತನ್ನ ಸ್ತೌತ್ಯಮಾಳ್ಪರ ಬಳಿಯಲ್ಲಿ | ಹಾಹಾ | ಭೃತ್ಯನಾಗಿ ನಿಂದಾಗ ನಿತ್ಯವೊಲಿದು ಅಪ ಮೃತ್ಯು ಪರಿಹರಿಸುವ ಮುತ್ಯನ್ನ ಕಾಯಿದನ್ನ ವಂದಿಸು ||18|| ದ್ರವ್ಯಕರ್ಮದಿ ವಸ್ತಾವಾ ಇವು ಅವ್ಯಯ ಹರಿ ವಿಸ್ತಾವಾ ತೋರಿ ಹವ್ಯಾದಿ ಯಜ್ಞ ಪ್ರಸ್ತಾವಾ ರಚಿಸಿ ದಿವ್ಯ ಮೂರುತಿ ತನ್ನ ಸ್ಥಾವಾ | ಹಾಹಾ | ಭವ್ಯ ಲೋಕಕೆ ಸಂಜ್ಞೆ ಇತ್ತು ಸೇವ್ಯಮಾನನಾದ ಅವ್ಯಕ್ತವಾಸಾ ಸವ್ಯದಲ್ಲಿಪ್ಪನ್ನ ವಂದಿಸು ||19|| ಶಬ್ದ ಸ್ಪರ್ಶ ರೂಪ ರಸ ಗಂಧ ಅಬ್ಧಾವು ಮತ್ತೆ ಪ್ರಕಾಶಾ ವಾಯು ನಿಬ್ಬಡಿಯಾದ ಆಕಾಶವಾಯು ಶಬ್ದ ಹಸ್ತಂಘ್ರಿಲೇಶಾ | ಹಾಹಾ | ಇಬ್ಬಗಿ ಗುಹ್ಯವು ಶಬ್ದಗ್ರಹ ಚಕ್ಷು ತಬ್ಬು ಜಿಹ್ವೆ ಘ್ರಾಣಗಬದಿ ಮಾಳ್ಪನ್ನ ವಂದಿಸು ||20|| ಪಿತಾಮಹಾ ಸುರಪಾಲಾ ದಿಗ್ದೇವತಿಗಳು ರವಿ ವಾಯು ಶೀಲಾ ಗಂಗಾ ಪ್ರತಿವೇದ್ಯರು ಸ್ವಾಹಾಲೋಲಾ ಅಜಾಸುತ ಜಯಂತನು ಕಮಲಾ | ಹಾಹಾ | ಪಿತಸ್ವಯಂಭುವಾ ಬೃಹಸ್ಪತಿ ಪಂಚಪ್ರಾಣರು ಮತಿಪ್ರದಾ ಪ್ರವಾಹಾಹುತವಾದ್ಯಾರಿಷ್ಟನ್ನ ವಂದಿಸು ||21|| ತತುವಕದಭಿಮಾನಿ ದೇಹಾ ಉಂಟು ತತುವೇಶ ಜೀವರ ಸ್ನೇಹ ಸಿರಿ ಪತಿತಾನೆ ಪ್ರವೇಶ ಮೋಹಾದಲ್ಲಿ ಪ್ರತಿದಿನ ವಾಸ ಸಂದೇಹಾ | ಹಾಹಾ | ಸತತ ಮಾಡಲಿ ಸಲ್ಲಾ ಚತುರ ಬಗೆ ತಿಳಿ ದಿತರ ವ್ಯಾಕುಲ ಬಿಟ್ಟ ಮತಿಯಾಗಿ ಮೋದನ್ನ ವಂದಿಸು||22|| ಪಂಚಭೇದಾರ್ಥವ ತಿಳಿಯೋ ದುಷ್ಟ ಪಂಚೇಂದ್ರಿಯಗಳ ಅಳಿಯೊ ಜ್ಞಾನಿ ಪಂಚೆಯಲ್ಲಿ ಪೋಗಿ ಸುಳಿಯೋ | ಹಾಹಾ | ಮಿಂಚಿನಂದದಿ ಲೋಕಾಸಂಚಾರ ಮಾಡುತಾ ಕೊಂಚೆದವನಾಗಿ ಚಂಚಲಾ ತೋರಿ ಹರಿಯಾ ವಂದಿಸು ||23|| ಕಲಿ ನಾಲ್ವರಿಗೆ ಪ್ರವೇಶಾ ಇಲ್ಲಾ ಉಳಿದವರಿಡಿದು ಗಿರೀಶನೊಳು ನೆಲೆಯಾಗಿಪ್ಪ ದಾನೀಶಾ ಶಬ್ಧಾ ಬಳಲೀಸುವದಕವ ಹೇಸಾ | ಹಾಹಾ | ಜಲಜಜಾಂಡದ ಮಧ್ಯ ಬಲು ದುಃಖಕೆ ವೆಗ್ಗಳ ಶಿರೋಮಣಿ ಇವನ್ನಾಳದನ್ನ ಒಡಿಯನ್ನ ವಂದಿಸು ||24|| ಮುಕ್ತಿಲಿ ತಾರತಮ್ಯವೆನ್ನು ಆಸಕ್ತನಾಗಿ ಕೇಳು ಇನ್ನು ಇಂಥಾ ಉಕ್ತಿಗೆ ಕೇಡಿಲ್ಲಾವೆನ್ನ ಕಾವಾ ಶಕ್ತಿವಂತನು ನಮ್ಮನ್ನ | ಹಾಹಾ | ರಿಕ್ತವೃತ್ತಿಯಲ್ಲಿ ವಿರಕ್ತನಾಗು ದು ರೂಕ್ತಿಯ ತೊರೆದು ವಿಮುಕ್ತನಾಗು ಹರಿಯಾ ವಂದಿಸು ||25|| ಹರಿವುಂಡ ಎಂಜಲಾ ಉಂಡು ಮತ್ತೆ ಹರಿವುಟ್ಟ ಉಡುಗೆ ಕೈಕೊಂಡು ಉಟ್ಟ ಹರಿ ನಿರ್ಮಾಲ್ಯವೆ ಗಂಡು ತೆರನಾಗಿ ಮುಡಿದಿದ್ದ ಹಿಂಡು |ಹಾಹಾ | ದುರಿತಗಳ ಗೆದ್ದು ಹರಿ ಮಾಯಾವಿಡಿದು ವು ಚ್ಚರಿಸು ನಾಮಂಗಳು ನಿರುತರಾ ರಂಗನಾ ವಂದಿಸು ||26|| ಚತುರ್ವಿಧ ಅರ್ಚಕರು ಶುದ್ಧದಾರುತಿಗಳು ಜಗದೊಳಧಿಕರು ಎನ್ನು ಸತತ ನುಡಿವರು ಶೋಧಕರು ಜ್ಞಾನಿ - ಗತಿಶಯನೆಂದು ಧಾರ್ಮಿಕರು | ಹಾಹಾ | ಕ್ಷಿತಿಯೊಳು ಕೇವಲ ರತಿಪತಿಜನಕಂಗೆ ಹಿತವಾಹಿಯಿಪ್ಪ ಸಮ್ಮತವೆಂದು ಕೃಷ್ಣನ್ನ ವಂದಿಸು ||27|| ನಿಷ್ಠೆಯಿಂದಲಿ ಕೃಷ್ಣ ಕೃಷ್ಣನೆಂದು ಮೂರು ಸಾರಿ ಕೂಗಿ ಸಾರಿ ಪೇಳಿ ದಷ್ಟಮಾತುರದಲ್ಲಿ ಮಾಡಿ ಓಡಿ ನಷ್ಟವಾಗೋವು ಹೆದರಿ | ಹಾಹಾ | ಗಟ್ಯಾಗಿ ದೊರಕೋದು ಇಷ್ಟು ಪುಣ್ಯದಲ್ಲಿ ಸಂ ತುಷ್ಟನಾಗುವಾ ಸಿದ್ದಾ ವೃಷ್ಟಿಕುಲಜನ್ನ ವಂದಿಸು ||28|| ರಥಕೆ ಕುದರಿಯಂತೆ ಕಟ್ಟೀ ಭಕ್ತ ಪಥವ ಪಿಡಿಸಿದನಾ ಅಟ್ಟೇ ಬಿಟ್ಟ ವ್ಯಥಿಯ ಮಾಡಿದ ಮೊಳೆ ತಟ್ಟಿ ಮನ್ಮಥ ಪಿತನಾದಡಿ ಗುಟ್ಟೀ | ಹಾಹಾ | ಸಥೆ ಇತ್ತದು ನೋಡು ಪೃಥ್ವಿಯೊಳಗೆ ಖಗ ರಥನ ಕಾರುಣ್ಯಕೆ ಪ್ರತಿಯಿಲ್ಲ ಪೊರೆವನ್ನ ವಂದಿಸು ||29|| ಕೊಟ್ಟಾರೆ ತಪ್ಪಾದದೇನು ಬಲು ದುಷ್ಟ ಜನಾ ತಿಮಿರಭಾನು ನಿತ್ಯಾ ನುಷ್ಠಾನ ಮಾಡೋದು ನೀನು ಹರಿ ಪಟ್ಟಣ ಇಲ್ಲಿಗೆ ಗೇಣು | ಹಾಹಾ | ಕೊಟ್ಟಿದ್ದು ಉಂಡು ವಿಶಿಷ್ಟನಾಗಿ ಬಾಳು ಕಟ್ಟಕಡೆಯಲಿ ನಿಷ್ಠನಾಗಿ ಹರಿಯಾ ವಂದಿಸು||30|| ಜ್ಞಾನವಿಲ್ಲಾ ಮುಕ್ತಿ ಇಲ್ಲಾ ಇದು ಅನಂತಕಾಲಕೆ ಬಲ್ಲಾದೆನ್ನ ಸ್ನಾನಾದಿಗಳ ಮಾಡೆ ಎಲ್ಲಾ ಪುಣ್ಯ ತಾನುಂಟಾ ಸಂಪದವಿಲ್ಲಾ | ಹಾಹಾ | ನಿನ್ನೊಳಗೆ ನೀನು ಧೇನಿಸು ಅನುಭವ ಮಾನವನಾಗದೆ ಕಾಣಿಸ ಹರಿಯನ್ನ ವಂದಿಸು ||31|| ಅಜಗೆ ನಿರ್ಮಳವಾಗಿ ಪೊಳೆವಾ ಬೊಮ್ಮಜಗೆ ಕನ್ನಡಿಯಂತೆ ಸುಳಿವಾ ಸುರ ವ್ರಜಕೆ ತರಣಿಯಂತೆ ನಿಲುವಾ ಮನುಜರಿಗೆ ಮಿಂಚಿನ ತೆರೆವೀವಾ | ಹಾಹಾ | ಸುಜನರಿಗೆ ತನ್ನ ಭಜನಿಯ ಪಾಲಿಸಿ ನಿಜರೂಪ ಕೊಡುವಾ ವಿರಜನದಿಯ ಪೆತ್ತನ್ನಾ ವಂದಿಸು ||32|| ಹದಿನಾಲ್ಕು ಲೋಕದ ಮಧ್ಯದಲ್ಲಿ ಅಧಿಕವಾಗಿವೆ ಅಭೇದ್ಯಾ ಮೂರು ಸದನಗಳುಂಟು ಅನಾದ್ಯಾ ಕಾಲ ಹದುಳವಾಗಿಪ್ಪವು ಸಾಧ್ಯಾ | ಹಾಹಾ | ಮೊದಲು ಮುಕ್ತಿಗೆ ಪೋದಾ ಪದುಮ ಭವಾದ್ಯರು ಇದೆ ಪದವಿಯಲಿ ತೋಷದಲ್ಲಿ ಇಪ್ಪದು ನೋಡಿ ವಂದಿಸು ||33|| ಜೀವರ ಪ್ರಮಾಣೆಂದೆ ಲೋಕ ಜೀವನು ತಮಗೆ ತಾವಂದೆ ಹೀಗೆ ಭಾವಿಸು ಮರ್ಯಾದಿಯೆಂದೆ ಸಿದ್ಧಾ ಶ್ರೀವರ ಮಾಡಿದೆ ಅಂದೆ | ಹಾಹಾ | ಆವಾವಾ ಸ್ಥಾನದಿ ಅವರವರಾ ಇಟ್ಟು ಸೇವಿಯ ಕೊಂಬ ಪಾವನ ಮೂರುತಿಯ ವಂದಿಸು ||34|| ಮೊರೆ ಇಟ್ಟು ಬೇಡಲು ಕೊಡನು ಅವಾಕರದಾ ಮಾತಿಗೆ ವಡಂಬಡನು ಬಲು ಪರಿತೋರಲು ದಯವಿಡನು ತನ್ನ ಸರಿಬಂದರೆಯಲ್ಲಿ ಬಿಡನು | ಹಾಹಾ | ತುರುಬು ಹಿಡಿದು ತುಪ್ಪಾ ಸುರಿಸುವವಲ್ಲೆನೆಂದರೆ ಕೇಳಾ ಶರಣಗೆ ಶರಣನಾಗಿಪ್ಪನ್ನ ವಂದಿಸು ||35|| ಭಾಸುರ ದೀನ ಮಂದಾರಾ ರತ್ನ ರಾಶಿ ಹಗಲು ಬೇಗ ಬಾರಾ ನಿನ್ನ ದಾಸನೆಂದರೆ ಕೆಲಸಾರಾ ಅಂದಾ ಮೀಶೆಕೂಟ್ಟಿಸಿಕೊಂಡ ಧೀರಾ | ಹಾಹಾ | ಏಸು ಬಗೆಯಲ್ಲಿ ವರ್ಣಿಸಬಲ್ಲೆನು ಮಾನಿಸ ವೇಷನ ಧರಿಸಿದ ಸುಲಭನ್ನವಂದಿಸು ||36|| ಗಲಭೆ ಇದೇನು ಎಂಬ ಸುಳಾದಿ ವಲಿಸಿದನು ನೋಡಿಲೇಸು ನಮಗೆ ಕೆಲಕಾಲ ಕೊಟ್ಟು ಮನ್ನಿಸು ಲಾಲಿ ಸಲಹುವ ದಾಸರಾ ನೆನೆಸು| ಹಾಹಾ | ಬಳಲಿದ್ದು ಕರಿಯಾ ಹುಯ್ಯಾಲಿಗೆ ಬಂದೊದಗಿದ ನಳಿನನಾಭನ ದಯಾ ಜಲನಿಧಿ ಎಂದು ಇಂದು ವಂದಿಸು||37|| ಎಂಭತ್ತು ನಾಲುಕು ಲಕ್ಷಾ ಯೋನಿ ಇಂದಾಗಿ ಮಾಡಿದಾ ದಕ್ಷಾ ತಾನೆ ಡಿಂಭಾದೊಳಗೆ ನಿಂತು ದೀಕ್ಷಾ ಬದ್ಧ ಎಂಬೋದು ತಿಳುಪುವಧ್ಯಕ್ಷಾ | ಹಾಹಾ | ಕುಂಭಿಣಿಯೊಳಗೆಲ್ಲಾ ಉಂಬೋದ ತಪ್ಪಿಸಿ ಬೆಂಬಿಡದಲೆ ಸರ್ವ ತುಂಬಿಕೊಂಡಿಪ್ಪನ್ನ ವಂದಿಸು ||38|| ಇದರೊಳು ಭೂಸುರ ಬಿಂಬಾವನ್ನ ಅಧಿಕ ಮಾಡಿದನು ಕಂಸಾಸುರನ ವಧೆ ಮಾಡಿದಾ ಸುರೋತ್ತಂಸಾ ತನ್ನ ಪದವ ನಂಬಲು ಪಾಪಧ್ವಂಸಾ | ಹಾಹಾ ||39||

Thoughts & Reflections

0

No reflections shared yet. Be the first to share your thoughts!

Share your thought