Bhasaka
← Back to home

ವಂದೇ ಮುಕುಂದ ನಮೊ

Author: ವಿಜಯದಾಸCategory: ಶ್ರೀಕೃಷ್ಣ
ವಂದೇ ಮುಕುಂದ ನಮೊ | ವಂದೇ ಮುಕುಂದ ನಮೊ | ವೃಂದಾರ ಕೇಶ ನಮೊ | ನಂದ ಮೂರುತಿ ಪರಮಾನಂದ ನರಸಿಂಹಾ ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ | ವಸುಮತಿಗೆ ತಾನೆ ಸ್ವಾಮಿ ಎಂದು || ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ | ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ ||1|| ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ | ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ || ಲಾಸನಾದ್ಯರ ಪಾಲಿಸಿದ ನರಸಿಂಹಾ ||2|| ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ | ಗಜಪಗೀಯ ಮೊಗನೆ ಆನಂದ ಮಗನೇ || ಭಜಿಸುವನು ಗತಿ ಕೊಡುವ ಜನಮೇಜಯ ನೃಪವರದ | ವಿಜಯವಿಠ್ಠಲ ವರದಾತೀರ ನರಸಿಂಹ ||3||

Thoughts & Reflections

0

No reflections shared yet. Be the first to share your thoughts!

Share your thought