Bhasaka
← Back to home

ವರಗಳನು ಕೊಡುವದು ವಾಸುಕಿಯ ಪ್ರಿಯಾ

Author: ವಿಜಯದಾಸCategory: ಶ್ರೀಸುಬ್ರಹ್ಮಣ್ಯ
ವರಗಳನು ಕೊಡುವದು ವಾಸುಕಿಯ ಪ್ರಿಯಾ | ಕರುಣದಿಂದಲಿ ಒಲಿದು ಕಂಡನಾತುರದಲಿ ಇಂದ್ರಸಮಾನ ದೇವತೆಯೆ ರತಿಪತಿಯೇ | ಇಂದಿರೇಶನ ನಿಜಕುಮಾರ ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ ||1|| ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ ||2|| ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ ಸ್ಕಂದನೆನಿಸಿದೆ ||3|| ರುಕ್ಮಿಣಿಯಲಿ ಜನಿಸಿ ಮತ್ಸ್ಯ ಉದರದಲಿ | ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು || ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ | ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ ||4|| ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ | ಮನೋ ವೈರಾಗ್ಯ ಚಕ್ರಾಭಿಮಾನಿ || ಎನಗೊಲಿದ ವಿಜಯವಿಠ್ಠಲರೇಯನಂಘ್ರಿ | ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ ||5||

Thoughts & Reflections

0

No reflections shared yet. Be the first to share your thoughts!

Share your thought