Bhasaka
← Back to home

ವರದೆ ಸಮಸ್ತ ವರದೆ

Author: ವಿಜಯದಾಸCategory: ಶ್ರೀಕೃಷ್ಣ
ವರದೆ ಸಮಸ್ತ ವರದೆ | ಪರಮ ಭಕುತಿಯಿಂದ ತುತಿ | ಪರನ ಪೊರದೇ ನೋಡಿದಾಕ್ಷಣದಲ್ಲಿ ಅನಂತ ಜನ್ಮದಿಂದ | ಮಾಡಿದ ಪಾಪಗಳು ಪರಿದವಯ್ಯ | ಆಡಲೇನು ತೋಯ ಸ್ಪರ್ಶವಾಗಲು | ನಲಿ | ದಾಡಿದರು ಗೋತ್ರಜರು ಇವನ ಪುಣ್ಯಕ್ಕೆ ಎಣಿಯೇ ||1|| ಮಿಂದು ಮನಃಪೂರ್ವಕದಿ ಕೊಂಡಾಡಲು ವಳಗೆ | ಪೊಂದಿದ ದಾಸವರು ಸುಮ್ಮನಹರೋ | ವೃಂದಾರಕರ ಬಳಗ ಇವನ ಸಾಧನೆ ಮಾಳ್ಪಾ ನಂದದಲಿ ಇಪ್ಪನೆ ಅಭಿಮೊಗರಾಗಿ||2|| ವರನ ಕೊಡುವೆನೆಂದು ವೈಷ್ಣವ ಮಣಿಯಿಂದ | ಧರೆಯೊಳಗೆ ಜನಿಸದೆ ಜಗಜ್ಜನನಿ | ಕರಸಿಕೊಂಡೆ ನೀನು ವರದೆ ವರದೆ ಎಂದು | ವರವ ಕೊಡು ಎನಗೆ ಸುಜನರು ಮೆಚ್ಚವಂದದಲಿ ||3|| ಇದನೆ ಬೇಡಿಕೊಂಬೆ ಇರಳು ಹಗಲು ನೀನೆ | ಒದಗಿ ಬಿನ್ನಹ ಮಾಡು ನಿನ್ನ ಪತಿಗೆ | ಮುದದಿಂದ ಹರಿಯಾಪ್ರವಿಷ್ಠಾಪ್ರವಿಷ್ಠ ಕಥೆ | ತುದಿನಾಲಿಗೆಯಲ್ಲಿ ಬರಲಿ ಬಣ್ಣಿಸುವಂತೆ ||4|| ಪಾಂಚಜನ್ಯಾದ್ರಿಯಲ್ಲಿ ಉದುಭವಿಸಿ ತುಂಗೆಯೊಳು | ಪಂಚನದಿ ಸಂಗಮವೆಂದೆನಿಸಿದೆ | ಪಂಚವಿಂಶತಿ ನಮ್ಮ ವಿಜಯವಿಠ್ಠಲದೇವ | ಕಾಂಚನದಂತೆ ಪೊಳೆವ ಮೂರ್ತಿ ಮನದೊಳಗಿರಲಿ||5||

Thoughts & Reflections

0

No reflections shared yet. Be the first to share your thoughts!

Share your thought