Bhasaka
← Back to home

ವರ್ಣಿಸಲರಿಯೆ ನಿನ್ನ

Author: ವಿಜಯದಾಸCategory: ಶ್ರೀಕೃಷ್ಣ
ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು | ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು | ಪರ್ಣ ಗಮನ ರಂಗಾ ಮಣಿಮಯ ಮುಕುಟ ಕಾಂ | ಚನದ ಕುಂಡಲ ಕರ್ಣ | ಫಣಿಯ ಕಸ್ತೂರಿ ನಾಮ | ಮಿನುಗುವ ಹಸ್ತ ಕಂಕಣ ಬೆರಳುಂಗರ | ಎಣಿಗಾಣೆ ಕೊರಳ ಮುತ್ತಿನಹಾರ ಕೌಸ್ತುಭ | ಮಣಿರಿಪುಗಳದಲ್ಲಣ ಕಂಬು ಸೂದರು | ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ | ಕಿಣಿ ಕನಕಾಂಬರವ ಪೂಸಿದ ಗಂಧ | ಪುನುಗು ಜವ್ವಾದಿಯಿಂದೆಸೆವ ಸುರತರುವೆ ||1|| ಸುಳಿನಾಭಿ ಉದರ ತ್ರಿವಳಿ ಕಾಂಚಿದಾಮ ಥಳಿ | ಥಳಿಸುವ ಪದಕ ನ್ಯಾ | ವಳ ಸರ ಸರಿಗೆ ಪ | ವಳದುಟಿ ಬಾಯ ತುಂಬಲು ಸೂಸುತಿರೆ ದಂತಾ | ವಳಿ ದಾಳಿಂಬರದ ಬೀಜ | ಎಳನಗೆ ಮಾತಾರಗಿಳಿಯಂತೆ ಶೋಭಿಸಿ | ಹೊಳೆವ ಕಪೋಲ ಸುತ್ತಲು ಬೆಳಗುವ ಕಂಗಳ ನಾಸಕಾಂತಿ | ಸುಳಿಗುರುಳು ತಿಂಗಳನಂದದಿ ಮೊಗ | ಚಲುವ ದೇವರ ದೇವ ಸಿರಿ ತಿರುವೆಂಗಳಾ||2|| ವರ ಚತುರ್ಭುಜ ಕಟಿ | ಕರ ಅಭಯ ಹಸ್ತ ಎರಡೇಳು ಲೋಕ ಜಠರದೊಳಡಗಿರೆ | ಕಿರಿದೊಡೆದರ್ಪಣ | ತೆರದಿಂಮೊಪ್ಪು ಜಾನು ಕರಿ ಪಲ್ಲಿನಂತೆ ಸುಂದರ ಜಂಘೆ ಗುಲ್ಫ ವಿ | ಸ್ತರ ಪಾದ ನಖ ಸಾ | ಲ್ಬೆರಳು ಪಾದತಳ ಪರಿ | ಪರಿ ರೇಖೆಗಳ ಕಾಲಿಂದಿಗೆ | ಬಿರಿದಿನ ಪೆಂಡೆಗಳ ತೊಡರನಿಟ್ಟು | ಮೆರೆವ ಪರಮಪುರುಷ ನಿತ್ಯ ಮಂಗಳಾ ||3|| ನಮೊ ನಿರಯ ದೂರ ಕಮಲನಾಭನೆ ಉ | ತ್ತಮ ಜನ ಮನೋರಥ | ಅಮರೇಶ ಪರಬೊಮ್ಮ | ರಮೆ ಮನೋವಲ್ಲಭ ಸಮರದೊಳುಳಿಹಿದಾ | ಗಮ ಸಿದ್ಧಾಂತನೆ ವಿ | ಕ್ರಮದಾನವ ಹರ | ಅಮಲ ಸುಖಸಾಂದ್ರ ದ್ಯುಮಣಿ ಕೋಟಿ ಪ್ರಕಾಶಾ | ವೆಂಕಟೇಶಾ | ಅಮಿತ ಮಹಿಮ ಸರ್ವೇಶಾ | ಅಪ್ರಾಕೃತ | ಪ್ರಮೆಯಭರಿತನಾದ | ಕುರುವಂಶ ವಿನಾಶಾ ||4|| ಭೂಗೋಳದೊಳಗಿದರಾಗಮ ತಿಳಿ | ದುರಗ ಗಿರಿ ಯಾತ್ರಿಗೆ | ಭೋಗದಾಶೆಯ ಬಿಟ್ಟು | ವೇಗದಿಂದಲಿ ನಿಜ | ಭಾಗವತರ ಸರಿಯಾಗಿ ಪೂರ್ವದ ಭವ ರೋಗವ ನೀಗುತ್ತ | ಆಗಲೀಗೆನ್ನದೆ | ಸಾಗಿ ಬರಲು ಚನ್ನಾಗಿ e್ಞÁನವ ನೀವುತ್ತ ಸಾಕುವಂಥ | ಯೋಗಿ ನಾರದನ ಪ್ರೀತ ತಿರುಮಲೇಶಾ | ಶ್ರೀ ಗುರು ವಿಜಯವಿಠ್ಠಲ ಭಕ್ತರ ದಾತಾ||5||

Thoughts & Reflections

0

No reflections shared yet. Be the first to share your thoughts!

Share your thought