Bhasaka
← Back to home

ವಾಣೀ ಪರಮ ಕಲ್ಯಾಣಿ

Author: ವಿಜಯದಾಸCategory: ಶ್ರೀಸರಸ್ವತಿ
ವಾಣೀ ಪರಮ ಕಲ್ಯಾಣಿ - ವಾರಿಜೋದ್ಭವನ ರಾಣೀ ನಾರೀ ಶಿರೋಮಣಿ ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು- ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ ಸರಸಿಜದಳ ಸುನೇತ್ರಿ ಸುರಮುನಿ ನಿಕರ ಸ್ತೋತ್ರಿ - ಶೋಭನಗಾತ್ರಿ ಕರುಣಾಸಾಗರೆ ಪವಿತ್ರಿ ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ- ಬರಧರೆ ಸುಂದರಿ ಎರಗುವೆ ಎನ್ನನು ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ ||1|| ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ ಸರ್ವರಿಗೆ ಮಹಾ ಪ್ರೀತೆ ನಿರ್ವಾಹವಂತೆ ಪತಿವ್ರತೆ ನಿರ್ಮಲ ಚರಿತೆ ಪೂರ್ವದೇವತೆ ಹರಿಜಾತೆ ಉರ್ವಿಯೊಳಗೆ ಮದಗರ್ವದ ಮತಿನಾ- ನೋರ್ವನಲ್ಲದೆ ಮತ್ತೋರ್ವನ ಕಾಣೆನು ಪೂರ್ವಜನ್ಮದ ಪಾಪ ಪರ್ವತದಂತಿದೆ ನಿರ್ವಾಹವನುಮಾಡೆ ದೂರ್ವಾಂಕುರದಿ ||2|| ನಗೆಮೊಗದ ಜಗದಂಬೆ-ನೀ ಗಂಧಲೇಪಿಸಿ ನಿಗಮಾಭಿಮಾನಿ ಸುಜ್ಞಾನಿ ಬಗೆಬಗೆ ವಿದ್ಯಾ ಭಾಸಿನಿ-ಶುಭಲಕ್ಷಣೆ ಅಗಣಿತ ಫಲದಾಯಿನಿ ಝಗಝಗಿಸುವ ಕರಯುಗಳ ಭೂಷಣ ಪ - ನ್ನಗವೇಣಿ ಕುಂಕುಮ ಮೃಗಮದ ವೊಪ್ಪಲು ಜಗತ್ಪತಿ ಪ್ರದ್ಯುಮ್ನ ವಿಜಯವಿಠ್ಠಲನಮಗಳೆ ಸುಖಾತ್ಮಕೆ ಜಗದಿ ಶುಶ್ರೋಣೆ ||3||

Thoughts & Reflections

0

No reflections shared yet. Be the first to share your thoughts!

Share your thought