Bhasaka
← Back to home

ವಾತನ್ನ ಜಯಾಜಾತನ್ನ

Author: ವಿಜಯದಾಸCategory: ಶ್ರೀಮಧ್ವಾಚಾರ್ಯ
ವಾತನ್ನ ಜಯಾಜಾತನ್ನ ಲೋಕ- ಪ್ರೀತನ್ನ ಸ್ತುತಿಸಿ ಖ್ಯಾತನ್ನ ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ ಅಸಮ ಸುಂದರ ಮತಿಧಾರ್ಯನ್ನ ನಿಶಾಚರ ಕುಲದೋಷ ಸೂರ್ಯನ್ನ ಆರಾ ಧಿಸುವ ಭಕ್ತರ ಸುಕಾರ್ಯನ್ನ ||1|| ವಾನರ ಕುಲದೊಳು ಧೈರ್ಯನ್ನ ಮುದ್ದು ಆನನ ಗೀರ್ವಾಣವರ್ಯನ್ನ ಆನಂದ ವಿe್ಞನ ಚರ್ಯನ್ನ ದುಷ್ಟ - ದಾನವರಳಿದತಿ ವೀರ್ಯನ್ನ ||2|| ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ ದ್ವಿಜಕೇತ ನಂಘ್ರಿಗೆ ಪ್ರೇಮನ್ನ ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು ವ್ರಜವ ಸದೆದ ಸಾರ್ವಭೌಮನ್ನ||3|| ಅದ್ವೈತ ಮತ ಕೋಲಾಹ ಲನ್ನ ವೇದ ಸಿದ್ಧಾಂತ ಶುಭಗುಣ ಶೀಲನ್ನ ಸದ್ವೈಷ್ಣವರನ್ನು ಪಾಲನ್ನ ಗುರು ಮಧ್ವಮುನಿ ಗುಣಲೋಲನ್ನ ||4|| ಚಾರುಚರಿತ ನಿರ್ದೋಷನ್ನ ಲೋಕ ಮೂರರೊಳಗೆ ಪ್ರಕಾಶನ್ನ ಧೀರ ವಿಜಯವಿಠ್ಠಲೇಶನ್ನ ಬಿಡದೆ ಆರಾಧಿಪ ಭಾರತೀಶನ್ನ ||5||

Thoughts & Reflections

0

No reflections shared yet. Be the first to share your thoughts!

Share your thought