Bhasaka
← Back to home

ವಿಜಯವಿಠ್ಠಲ ನಾಮ

Author: ವಿಜಯದಾಸCategory: ಶ್ರೀಕೃಷ್ಣ
ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಕಾಯ ಶುಚಿಯಾಗುವದು ಕಠಿನತನ ಪೋಗುವದು ಆಯು ಹೆಚ್ಚುವುದು ನಿಯೋಗಿ ಯಾಹಾ ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ ||1|| ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು ದ್ವೇಷ ಪುಟ್ಟದು ತನಗೇತರ ಮೇಲೆ ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು||2|| ಹೀನ ವಿಷಯಂಗಳಿಗೆ ಅವನ ಮನವೆರಗಿದರೆ ಕಾಣಿಸುವನು ತಾನೆ ಮುಂದೊಲಿದು ಏನು ಹೇಳಲಿ ಹರಿಯ ಅನುಕಂಪನಾತನಕೆ ಏಣಿಸಿ ಪೊಗಳಿದರೆ ಕಾಲ ಕಡೆಗಾಣನು ||3|| ದೇವಾದಿ ಮುನಿತತಿಯ ಮೊದಲಾದವರು ನೆನೆದು ಆವಾವ ಸೌಖ್ಯದಲಿ ಇಪ್ಪರದಕೋ ಭಾವದಲಿ ತಿಳಿದು ಭಕುತಿಯ ಮಾಡಿರೋ ಜನರು ಕಾವುತಲಿಪ್ಪ ಸರ್ವಾಶ್ರಯನಾಗಿ ಹರಿ||4|| ಕಂಡವಗೆ ದೊರಕದು ಈ ನಾಮ ಜಪಿಸಿದರು ಕಂಡವಗೆ ಬಲು ಸುಲಭ ಭಯವೆಯಿಲ್ಲಾ ಮಂಡಲವ ಚರಿಸಿ ನಾನಾ ವ್ರತ ಮಾಡದಿರಿ ಕೊಂಡಾಡು ವಿಜಯವಿಠ್ಠಲನ ಆಸರ ಸೇರಿ||5||

Thoughts & Reflections

0

No reflections shared yet. Be the first to share your thoughts!

Share your thought