Bhasaka
← Back to home

ವಿಜಯವಿಠ್ಠಲ ವಿಜಯವಿಠ್ಠಲ

Author: ವಿಜಯದಾಸCategory: ಶ್ರೀಕೃಷ್ಣ
ವಿಜಯವಿಠ್ಠಲ ವಿಜಯವಿಠ್ಠಲ ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ವನಚರ ನಗಧರ ಅವನಿಯ ಉದ್ಧಾರ ಹನನ ಮಾಡಿದಿಯೊ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ - ವಣದಿ ಪಡದೋ ಶ್ರೀ ವಿಜಯವಿಠ್ಠಲಾ ||1|| ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ||2|| ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ||3|| ಬಕಮುಖ ದನುಜರ ಹಕ್ಕಲಗೊಳಿಸಿ ಬಲು ಯುಕುತಿಯಿಂದಲಿ ಭಕುತರ ಪೊರದೆ ವಿಕಸಿತ ಕಮಲನಯನ ಕಂಜನಾಭನೆ ಸಕಲ ಸುರರ ಪಾಲ ವಿಜಯವಿಠ್ಠಲಾ ||4|| ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ ರುಕ್ಮಿಣಿ ಪತಿಯಾದಾ ಚಕ್ರಪಾಣಿ ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ ||5|| ರಣದೊಳರ್ಜುನ ಬಾಣ ಧನು ಕೆಳಗಿಡಲಾಗಿ ಘನವಾದ ವಿಶ್ವರೂಪವ ತೋರಿದೆ ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ ವನಜ ಸಂಭವನಯ್ಯ ವಿಜಯವಿಠ್ಠಲಾ ||6|| ವನಿತೆಯರ ವ್ರತ ಭಂಗವ ಮಾಡಿ ದಾನವರ ಮೋಹಿಸಿದೆಯೊ ಪವನನೊಡಿಯಾ ಉನುಮತ ಜನ ಕುಲ ಸನುಮತ ಶಾಸ್ತ್ರವ ವ- ದನದಲಿ ಮೆದ್ದಿಯೊ ವಿಜಯವಿಠ್ಠಲಾ ||7|| ರಜೋತಮ ಗುಣವನು ಭುಂಜಿಸುತ ಕುಜನರ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ ಸುಜನಪಾಲ ನೀನು ವದಗಿ ವಾಜಿಯನೇರಿ ಭಜನಗೈಸಿದ ವೇಗ ವಿಜಯವಿಠ್ಠಲಾ ||8|| ಗೋಕುಲದಲಿ ಅನೇಕ ಲೀಲೆಯ ತೋರಿ ಬೇಕಾದ ವರ ಪುಂಡರೀಕಗಿತ್ತೆ ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ||9||

Thoughts & Reflections

0

No reflections shared yet. Be the first to share your thoughts!

Share your thought