Bhasaka
← Back to home

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ

Author: ವಿಜಯದಾಸCategory: ಶ್ರೀಕೃಷ್ಣ
ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ | ಪುಟ್ಟುವದು ಬಿಡಿಸೊ ಎನ್ನವರೊಳಗಿರಿಸೊ ಬಲುಕಾಲ ಮಲ-ಮೂತ್ರ ಡೊಳ್ಳಿನೊಳು ಬಿದ್ದು | ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು || ಹಲವು ಮಾತೇನು ಎನಗೆ ಬಿಡದು | ಸಲಹಬೇಕಯ್ಯಾ ಸಮುದ್ರ ಶಯ್ಯಾ ||1|| ಕರ ಪಿಡಿದು ಎತ್ತುವ ಬಿರುದು ಪರಾಕ್ರಮ | ಮರಳಿ ಮಿಗಿಲೊಂದು ದೇವರಿಗೆ ಉಂಟೆ || ಮರೆವು ಮಾಡದೆ ಮಹಾದುರಿತವ ಪರಿ_ | ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ||2|| ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ | ಚೆನ್ನಾಗಿಡು ನಿತ್ಯ ಪ್ರಾಣನಾಥಾ ಅಭಯ ಹಸ್ತಾ || ಅನ್ನದಾತಾ ಸಿರಿ ವಿಜಯವಿಠ್ಠಲರೇಯಾ | ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ ||3||

Thoughts & Reflections

0

No reflections shared yet. Be the first to share your thoughts!

Share your thought