Bhasaka
← Back to home

ವಿಠ್ಠಲನ ಪದವನಜ ತುಂಬೆ

Author: ವಿಜಯದಾಸCategory: ಶ್ರೀಕೃಷ್ಣ
ವಿಠ್ಠಲನ ಪದವನಜ ತುಂಬೆ ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ e್ಞÁನ ಭಕುತಿ ವೈರಾಗ್ಯದಲಿ ಜಾಣ ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ ಮಾನಸದಲಿ ಹರಿಯ ಧ್ಯಾನ ಮಾಡುವ ಆನಂದಮತಿ ವಿಮಲ ಸರ್ವವಿಧಾನ ||1|| ಮಾತುಮಾತಿಗೆ ನೆನೆಸಿದವರ ಭವದ ಮಾಯಾ ಸೇತುವಿಯ ಕಡಿದು ಸಂತತವಾಗಿ ಸಹಾಯಾ ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ ಭೂತಳದೊಳು ಗುರು ಪುರಂದರ ರಾಯಾ ||2|| ಪಾವನ ಶರೀರ ಎನಗೆ ವಜ್ರ ಪಂಜರಾ ಕೂವಾದಿ ಮತಹರ ನಂಬಿದವರಾಧಾರ ಪಾವಮಾನಿಯ ಮತದಲಿಪ್ಪ ಮನೋಹರ ಶ್ರೀ ವಿಜಯನಗರ ಮಂದಿರದೊಳಗುಳ್ಳ ಶ್ರೀ ವಿಜಯವಿಠಲನ್ನ ಪೂಜಿಸುವ ಧೀರ ||3||

Thoughts & Reflections

0

No reflections shared yet. Be the first to share your thoughts!

Share your thought