Bhasaka
← Back to home

ವಿಠ್ಠಲನ ಮಂತ್ರ ಜಪಿಸೋ

Author: ವಿಜಯದಾಸCategory: ಶ್ರೀಕೃಷ್ಣ
ವಿಠ್ಠಲನ ಮಂತ್ರ ಜಪಿಸೋ ಎಲೆ ಮನವೆ ಕುಟಿಲವನು ಕಳೆದು ಬಲು ಕುಶಲತನವೀವದು ಆಗಮ ಸಿದ್ಧಾಂತದಲ್ಲಿ ಪೊಳೆವ ಮಂತ್ರ ಯೋಗಿಗಳ ಮನಕೆ ಬಲು ಸೌಮ್ಯ ಮಂತ್ರ ಸಾಗರವು ಮಥಿಸಲು ಉದಿಸಿ ಪೊರೆದ ಮಂತ್ರ ಯೋಗಿಗಳು ನೆನೆದರೆ ಸವಿಯಾದ ಮಂತ್ರ ||1|| ಸುಧಾಮಗೆ ವೊಲಿದು ಸೌಭಾಗ್ಯವಿತ್ತ ಮಂತ್ರ ಕದನದೊಳು ಫಲ್ಗುಣನ ಕಾಯಿದ ಮಂತ್ರ ಮಧುರಾಮೃತವಾಗಿ ಜಿಹ್ವೆಗೆ ಒಪ್ಪುವ ಮಂತ್ರ ಯದುಕುಲಾಗ್ರಣಿಯಾದ ವಿಶ್ವಮಂತ್ರ ||2|| ಹಾರೈಸಿದವರಿಗೆ ವರವನೀವ ಮಂತ್ರ ಕಾರುಣ್ಯನಿಧಿ ವಿಜಯವಿಠ್ಠಲರೇಯನ್ನ ಮಂತ್ರ ಸೇರಿದವರನ್ನ ಬಿಡದೆ ಪೊರೆವ ಮಂತ್ರ ||3||

Thoughts & Reflections

0

No reflections shared yet. Be the first to share your thoughts!

Share your thought