Bhasaka
← Back to home

ವಿರಹ ನಿಲ್ಲದು ಕಾಣೊ

Author: ವಿಜಯದಾಸCategory: ಶ್ರೀಕೃಷ್ಣ
ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ | ಗುರುತ ಮಾಡಿದ ಸೊಗಸು ಮರಿಯದೊ ಗೋಪಾಲ ಕಣ್ಣುನೋಟ ತಿರುಹಿ ನೀ ಕೈಯ ಮುದರಿ ವರಹ | ಹೊನ್ನು ಕಂಭದಲಿ ನಿಂದು ತೋರಿ | ಭ್ರಮಿಸಿ ಕುನ್ನಿಗೆ ಕಣಿಯನಿಕ್ಕಿ ಹೊಡೆಯೊನಾಗಿ | ಹೆಣ್ಣು ಭಾವನ ಕರೆದು ಸೂಚನೆ ಮಾಡಿದನು ||1|| ಪುಟ್ಟ ಹೆಜ್ಜೆಲೆ ಸಾಗಿ ಮುದ್ದು ಕೊಡಲು ಬಯಸಿ | ದೃಷ್ಟಿಯಿಂದ ನೋಡಲು ಭ್ರಾಂತಳಾಗಿ | ಅಟ್ಟ ಅಡಿವೆಯೊಳು ನಡಿವೆ ನಾ ಪೋಗಲು | ದುಷ್ಟ ನಾದಿನಿ ಕಂಡು ಮಾವಗೆ ಪೇಳಿದಳು ||2|| ಇಂದಿರೇಶ ತಾನಾಗಿ ಎದೆ ಮುಟ್ಟಿ ನಿನಗೆ | ಇಂದಿನ ದಿವಸ ನಾ ಭ್ರಮಿಸಿದ್ದು | ಒಂದೊಂದು ಬಗೆ ನೆನಿಸಿ ಕಲೆಕಲೆಗಳು ಕೆರಿದ್ಯಾಸೆ | ಮುಂದೆಗಾಣದೆ ನಡಿಯೆ ಗಂಡಾ ತಲೆದೂಗಿದನು||3|| ಬೀದಿಯೊಳಗೆ ನೀನು ಕುದರಿಯ ಕುಣಿಸುತ ಹಾದು ಪೋಗಲು ನಮ್ಮ ಮನಿಯ ಮುಂದೆ | ಪಾದಕ್ಕೆ ಕಪ್ಪನೆ ಇಟ್ಟು ತೊಟ್ಟ ಕುಪ್ಪಸ ಬಿಚ್ಚೆ | ಮದನ ನೋಡಿ ಮನೆಯಲ್ಲರಿಗೆ ಬೀರಿದನು||4|| ಪರಮಪುರುಷ ನೀನೆ ನಿನ್ನಂಗ ಸಂಗಕ್ಕೆ | ಸರಿಗಾಣೆ ಸ್ಮರಿಸೆ ಮನಸು ನಿಲ್ಲದೊ | ಸುರತ ಕೇಳಿಯ ಜಾಣ ವಿಜಯವಿಠ್ಠಲ ಎನ್ನ | ಕರೆದು ಮಸಕು ತೆಗೆದು ತರ್ಕೈಸೊ ಚನ್ನಿಗಾ ||5||

Thoughts & Reflections

0

No reflections shared yet. Be the first to share your thoughts!

Share your thought