Bhasaka
← Back to home

ವೆಂಕಟ ಬಾರೋ ರಿಪುಸಂಕಟ ಬಾರೊ

Author: ವಿಜಯದಾಸCategory: ಶ್ರೀಕೃಷ್ಣ
ವೆಂಕಟ ಬಾರೋ ರಿಪುಸಂಕಟ ಬಾರೊ ಕಿಂಕರಿಗೊಲಿದ ನಿಶ್ಶಂಕ ಬಾರೋ ಪೊಂದೇರಿನೊಳಗೆ ಭೂಮಿ ಇಂದಿರೆಗೂಡಿ ಚೆಂದದಿಂದಲೊಪ್ಪುತಿಹ ಇಂದುವದನ ಮಂದರೋದ್ಧಾರನೆ ಮಹಾನಂದ ಮೂರುತಿ ವೃಂದಾರಕ ವಂದ್ಯ ಪಾದ ವಂದಿಪನೆಂದು ||1|| ಲೌಕೀಕ ವಿಲಕ್ಷಣ ಅನೇಕ ಏಕ ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ಪ್ರಾಕೃತ ರಹಿತಗಾತ್ರ ಲೋಕಪಾವನ ಶೋಕ ಮೂಲ ನಾಶನ ವಿಶೋಕ ಜನಕ ||2|| ಅಂಗ ಅಂಗೀ ಭಾವದಿಂದ ಅಂಗದೊಳಿದ್ದು ಸಂಗಡ ತಿರುಗುವೊ ನೀಲಾಂಗ ನಿಸ್ಸಂಗ ಡಿಂಗರಿಗ ಹೃತ್ಕಮಲ ಭೃಂಗ ಜಗದಂತೆ- ರಂಗ ರಂಗರಾಜ ಸುಖಸಂಗ ಅನಂಗ ||3|| ಆಪ್ತಕಾಮ ಅಮೃತಾಂಗ ಗುಪ್ತಮಹಿಮ ತಪ್ತಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ ತೃಪ್ತ ತೃಣ ಬೊಮ್ಮಾದಿ ನಿರ್ಲಿಪ್ತವಾಸ ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲ ||4|| ಆಗಮ ನಿಗಮಖಣಿ ಅಗಣಿತ ಬಂಧು ಅಗನಾಗ ಧಾರಕನೆ ನಾಗ ಭಂಜನ ಆಗಸದಂಗಾಂಗುಷ್ಟದಿಂದ ಪೆತ್ತನೆ ಆಗಲೀಗಲೆನ್ನದಲೆ ಸಾಗಿ ಬೇಗದಿ||5|| ನಿರ್ದೋಷ ವಸ್ತು ನೀನೆಂದು ನಿರ್ಧಾರ ಮಾಡೆ ಪೊದ್ದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳು ಭದ್ರ ಫಲದಾಯಕ ಸಮುದ್ರಶಯನ ಮಧ್ಯಜೀವಿ ವಂದ್ಯ ಸುಪ್ರಸನ್ನ ಮೋಹನ್ನ ||6|| ಜೀವಾಭಿಮಾನಿ ಗಿರೀಶ ದೇವ ದೇವೇಶ ಜೀವರಾಶಿಗಳ ಸ್ವಾಭಾವ ಪ್ರೇರಕ ಜೀವನನಾಗಿ ನಮ್ಮ ಕಾವುತಲಿಪ್ಪ ರಾ- ಜೀವ ನಯನ ವಿಜಯ ವಿಠ್ಠಲ ಪೂರ್ಣ ||7||

Thoughts & Reflections

0

No reflections shared yet. Be the first to share your thoughts!

Share your thought