Bhasaka
← Back to home

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ

Author: ವಿಜಯದಾಸCategory: ಶ್ರೀಕೃಷ್ಣ
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪಂಕಜಭವ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ಕ್ರತುಭುಜ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ ||1|| ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ ಶತಪತ್ರವು ಹೃದ್ಗತವಾಗಲಿ ಉ- ನ್ನತ ಮಹಿಮನೆ ಕೀರುತಿವಂತನೆ ಅ- ಪ್ರತಿಭಾರತಮಲ್ಲ ಮೂರವತಾರಗೆ ಅತಿಪ್ರಿಯನೆನಿಪ ಮೂರತಿ ಚತುರದೇವ ||2|| ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ ಚ್ಯುತಿ ದೂರ ಶೌರೀ ಕಾಳಿಂಗ- ಮಥನ- ದುರಿತ ಮಾತಂಗ-ಮರಿಗೆ ಸಿಂಗ ತುತಿಪೆ ಕರುಣಾಂತರಂಗ ಕ್ಷಿತಿಯೊಳಗಹಿ ಪರ್ವತನಿವಾಸನೆ ಖರೆಗೊಳಿಸುವ ದುರ್ಮತಿಯನು ತೊಲಗಿಸಿ ತ್ವತು ಪಾದದಲಿಡು ಮತಿಯಲ್ಲದೆ ತಿರು - ಪತಿ ವಿಜಯವಿಠ್ಠಲ ಇತರವನರಿಯೆ ||3||

Thoughts & Reflections

0

No reflections shared yet. Be the first to share your thoughts!

Share your thought