Bhasaka
← Back to home

ವೆಂಕಟಾಚಲ ಪಂಕಜ ಪತಿ

Author: ವಿಜಯದಾಸCategory: ಶ್ರೀಕೃಷ್ಣ
ವೆಂಕಟಾಚಲ ಪಂಕಜ ಪತಿ | ಪಂಕಜ ಸಖ ಸಂಕಾಶಾನೇಕಾ | ಸಂಕಟಳಿದು ನಿಃಶಂಕನ ಮಾಡೊ | ಅಂಕೆಯವನೆಂದು || ಬಂದೆ ಎದುರಿಲಿ ನಿಂದೆ ಸಿರಬಾಗಿ | ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ | ತಂದೆ ನಿನಗ ಇಂದೆ ಅಂದದನು | ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ | ಸಂದೇ ನಾರದೆ ಮುಂದೆ ಬಾರದೆ ಎಂದೆಗೆಂದಿಗೆ ಮುಂದೆ ಜನನಗಳು ||1|| ನೋಡು ಎನ್ನ ಕೂಡಾಡು ದಯವನ್ನು | ಮಾಡು ಮುದದಿಂದಲಾಡು ಮಾತನು ನೀಡು ಕರುಣವ | ಜೋಡು ತೊಡುವೆನು ಮೂಢನೆಂದೆನದೆ ಹೋಡುಗಾರರು ಬೀಡಿನೊಳಗಿದ್ದು | ಕಾಡುವದು ನಾನಾಡಲೇನು | ಈಡು ನಿನಗೆಲ್ಲಿ ನಾಡೊಳು ಕಾಣೆ ಮೂಡಲಾದ್ರಿ ನಿಲಯಾ ||2|| ಸಾರಿದೆನೊ ಮನಸಾರ ನಿನ್ನಂಘ್ರಿ ಸಾರಾ| ಸಾರವೆಂಬದಾಸಾರವನು ನೂಕಿ | ಸಾರ ಹೃದಯರ ಸಾಲೆಲಿರಸೆನ್ನ | ಸಾರೆಗರೆಯೊ ಕಂಸಾರಿ ಪ್ರತಿದಿನ ಸಾರಥಿಯಾಗೊ ಸಾರಿಸಾರಿಗೆ ಸಾರಬೋಕ್ತಾ ವಿಜಯವಿಠ್ಠಲ ಕೆಲಸಾರದೆ ಸಾರಲಿರೊ ||3||

Thoughts & Reflections

0

No reflections shared yet. Be the first to share your thoughts!

Share your thought