Bhasaka
← Back to home

ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ

Author: ವಿಜಯದಾಸCategory: ಶ್ರೀಕೃಷ್ಣ
ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ ಕಿಂಕರರಿಗೊಲಿದ ನಿಃಶಂಕ ಬಾರೊ ಪೊಂದೇರಿನೊಳಗೆ ಭೂಮಿ ಇಂದಿರೆ ಕೂಡ | ಚಂದದಿಂದಲೊಪ್ಪುತಿಹ ಇಂದುವದನಾ ಮಂದರೋದ್ಧಾರನೆ ಮಹನಂದ ಮೂರುತಿ ವೃಂದಾರಕ ವಂದ್ಯಪಾಲ ವಂದಿಪೆ ನಿಂದು ||1|| ಲೌಕಿಕ ವಿಲಕ್ಷಣ ಅನೇಕ ಏಕಾ | ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ || ಪ್ರಾಕೃತ ರಹಿತಗಾತ್ರ ಲೋಕಪಾವನ | ಶೋಕ ಮೂಲನಾಶನ ಅಶೋಕ ಜನಕಾ ||2|| ಆಗಮ ಮಣಿ ಕಣಿಯೆ ಅಗಣಿತ ಬಂಧು | ಆಗನಾಗಧಾರಕನೆ ನಾಗ ಭಂಜನಾ || ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ | ಆಗಲೀಗಲೆನ್ನದಲೆ ಸಾಗಿ ವೇಗದಿ ||3|| ಅಂಗ ಅಂಗಿ ಭಾವದಿಂದ ಅಂಗದೊಳಿದ್ದು | ಸಂಗಡ ತಿರುಗುವ ನೀಲಾಂಗ ನಿಃಸಂಗಾ || ಡಿಂಗರಿಗೆ ಹೃತ್ಕಮಲ ಭೃಂಗ ಜಗದಂತ | ರಂಗ ರಂಗರಾಜ ಸುಖಸಂಗ ನಿಸ್ಸಂಗಾ ||4|| ಆಪ್ತಕಾಮಿ ಅಮೃತಾಂಗ ಗುಪ್ತ ಮಹಿಮ | ತಪ್ತ ಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ || ತೃಪ್ತ ತೃಣ ಬೊಮ್ಮದಿ ನಿರ್ಲಿಪ್ತ ವ್ಯಾಪ್ತಾ | ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲಾ ||5|| ನಿರ್ದೋಷ ವಸ್ತುವಿನಿಂದ ನಿರ್ಧರ ಮಾಡೆ | ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳೂ || ಭದ್ರ ಫಲದಾಯಕ ಸಮುದ್ರಶಯನಾ | ಮಧ್ಯಜೀವಿ ವಂದ್ಯ ಸುಪ್ರಸಿದ್ಧ ಮೋಹನ ||6|| ಜೀವಾಭಿಮಾನಿ ಗಿರೀಶ ದೇವ ದೇವೇಶಾ | ಜೀವ ರಾಶಿಗಳ ಸ್ವಭಾವ ಪ್ರೇರಕಾ || ಜೀವನವಾಗಿ ನಮ್ಮನು ಕಾವುತಿಪ್ಪ | ರಾಜೀವ ನಯನ ವಿಜಯವಿಠ್ಠಲ ಪೂರ್ಣಾ ||7||

Thoughts & Reflections

0

No reflections shared yet. Be the first to share your thoughts!

Share your thought